ಕಿಸಾನ್ ಕ್ರಾಂತಿ ಪ್ರತಿಭಟನೆಗೆ ಮಣಿದ ಕೇಂದ್ರ: 7 ಬೇಡಿಕೆ ಈಡೇರಿಸಲು ಸಮ್ಮತಿ

New Delhi: Police use water cannons to disperse farmers at Delhi-UP border during 'Kisan Kranti Padyatra', in New Delhi, Tuesday, Oct 2, 2018. (PTI Photo/Ravi Choudhary)(PTI10_2_2018_000025B)

ನವದೆಹಲಿ: ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್​ ಯೂನಿಯನ್​ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಕಿಸಾನ್​ ಕ್ರಾಂತಿ ಪಾದಯಾತ್ರೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ರೈತರ ಕೆಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದೆ.

ಕಿಸಾನ್ ಪಾದಯಾತ್ರೆಯಲ್ಲಿ ರೈತರ ಆಕ್ರೋಶ ಭುಗಿಲೇಳುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ರೈತರ 9 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಲಾಗಿದೆ. ಸಾಲಮನ್ನಾ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಸಮ್ಮತಿ ನೀಡಲಾಗಿಲ್ಲ.

ಸಾಲಮನ್ನಾ,ವಿದ್ಯುತ್, ಪೆಟ್ರೋಲ್​, ಡೀಸೆಲ್​ ದರ ಇಳಿಕೆ, ಸ್ವಾಮಿನಾಥನ್​ ಆಯೋಗದ ಶಿಫಾರಸುಗಳ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗ್ರಹಿಸಿ ಭಾರತೀಯ ಕಿಸಾನ್​ ಯೂನಿಯನ್​ ನೇತೃತ್ವದಲ್ಲಿ ರೈತರು ಕಿಸಾನ್ ಕ್ರಾಂತಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಉತ್ತರ ಪ್ರದೇಶದಿಂದ ಆರಂಭವಾದ ಯಾತ್ರೆ ಇಂದು ದೆಹಲಿಯತ್ತ ತೆರಳಿತ್ತು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿಗೆ ತೆರಳುತ್ತಿದ್ದ ಪಾದಯಾತ್ರೆ ನಿರತ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಉತ್ತರಪ್ರದೇಶ-ದೆಹಲಿ ಗಡಿಭಾಗದಲ್ಲಿ ತಡೆದಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಉರುಳಿಸಿ ತಮ್ಮ ವಾಹನಗಳನ್ನು ನುಗ್ಗಿಸಲು ಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತಿದ್ದಂತೆ ರೈತರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದರು.

ಇದರಿಂದ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದ ರೈತರು ಕೇಂದ್ರದ ವಿರುದ್ಧ ಕಿಡಿಕಾರಿದ್ದರು. ರೈತರ ಪಾದಯಾತ್ರೆ ಹಿಂಸಾಚಾರ ರೂಪ ತಳೆಯುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಕರೆದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ