ಜಕಾರ್ತ: ಭೂಕಂಪ ಮತ್ತು ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಾವಿನ ಸಂಖ್ಯೆ 1,234ಕ್ಕೆ ಏರಿಕೆಯಾಗಿದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ.
ಇಂದು ಮಧ್ಯಾಹ್ನ ಒಂದು ಗಂಟೆಯವರೆಗೂ ಭೂಕಂಪ ಮತ್ತು ಸುನಾಮಿಗೆ 1,234 ಜನ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಸಂಸ್ಥೆ ವಕ್ತಾರ ಸುಟುಪೊ ಪರ್ವೊ ನಗ್ರೊಹೊ ತಿಳಿಸಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ 832 ಶವಗಳು ಪತ್ತೆಯಾಗಿದ್ದವು. ಆದರೆ ಸೋಮವಾರ ನಡೆದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತದೇಹಗಳ ಪತ್ತೆ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ.
ಪಲು ಪಟ್ಟಣದ ಬಳಿಯಿರುವ ಪೊಬೊಯದಲ್ಲಿ ಸ್ವಯಂ ಸೇವಕರು 1,300 ಮೃತದೇಹಗಳನ್ನು ಸಾಮೂಹಿಕವಾಗಿ ಹೂಳಲು 100 ಮೀ. ಸಮಾಧಿಯನ್ನು ಮಾಡಲಾಗಿದೆ.