ಇನ್ನು ಕಳೆದ 2017ರಿಂದ ಟೀಂ ಇಂಡಿಯಾ ಆಡಿರುವ 10 ಏಕದಿನ ಸರಣಿಗಳಲ್ಲಿ ತಂಡ ಗಳಿಸಿರುವ ಒಟ್ಟು ರನ್ 11,241ರನ್. ಇದರಲ್ಲಿ ಮಧ್ಯಮ ಕ್ರಮಾಂಕ ಅಂದರೆ 4,5 ಹಾಗೂ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರುಗಳಿಸಿದ್ದು ಕೇವಲ 887ರನ್.
ಇನ್ನು ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಂಬಟಿ ರಾಯುಡು ಏಷ್ಯಾಕಪ್ನ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಕಳೆದ 21 ತಿಂಗಳಲ್ಲಿ ಮಧ್ಯಮ ಕ್ರಮಾಂಕದ ಕೇವಲ ಮೂವರು ಆಟಗಾರರು ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಯುವರಾಜ್ ಸಿಂಗ್, ಧೋನಿ ಹಾಗೂ ಕೇಧಾರ್ ಜಾಧವ್ ಮಾತ್ರ ಶತಕ ಸಿಡಿಸಿ ಮಿಂಚಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸಮನ್ಗಳ ರನ್
ಯುವರಾಜ್ ಸಿಂಗ್ 11 ಪಂದ್ಯ, 372 ರನ್. ಮನೀಷ್ ಪಾಂಡೆ 11 ಪಂದ್ಯ 179ರನ್. ರಹಾನೆ 6 ಪಂದ್ಯ 140ರನ್. ದಿನೇಶ್ ಕಾರ್ತಿಕ್ 15 ಪಂದ್ಯ 350ರನ್. ಕೆಎಲ್ ರಾಹುಲ್ 5 ಪಂದ್ಯ 37ರನ್. ಸುರೇಶ್ ರೈನಾ 03 ಪಂದ್ಯ 47ರನ್. ಇನ್ನು ಮಹೇಂದ್ರ ಸಿಂಗ್ ಧೋನಿ 44 ಪಂದ್ಯಗಳಿಂದ 1013ರನ್ಗಳಿಕೆ ಮಾಡಿದ್ದಾರೆ.
ಇನ್ನು ವಿಶ್ವಕಪ್ಗೆ ಟೀಂ ಇಂಡಿಯಾ 18 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ನಾಲ್ವರು ಬ್ಯಾಟ್ಸ್ಮನ್, ಇಬ್ಬರು ವಿಕೆಟ್ ಕೀಪರ್, ಮೂವರು ಆಲ್ರೌಂಡರ್,ಇಬ್ಬರು ಸ್ಪಿನ್ನರ್ ಹಾಗೂ ಐವರು ಬೌಲರ್ಗಳಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.
ಯಾರಿಗೆಲ್ಲ ಸ್ಥಾನ?
ವಿರಾಟ್ ಕೊಹ್ಲಿ(ಕ್ಯಾಪ್ಟನ್), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಅಂಬಟಿ ರಾಯುಡು, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್(ವಿ.ಕೀ), ಎಂಎಸ್ ಧೋನಿ(ವಿ.ಕೀ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್,ಯಜುವೇಂದ್ರ ಚಹಾಲ್,ಭುವನೇಶ್ವರ್ ಕುಮಾರ್,ಜಸ್ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.