ಬೆಂಗಳೂರು,ಅ.1-ಬೌದ್ಧಧರ್ಮದ ಪರಮೋಚ್ಛ ಧಾರ್ಮಿಕ ಮುಖಂಡ ಹಾಗೂ ನೋಬೆಲ್ ಪ್ರಶಸ್ತಿ ಪುರಸ್ಕøತರಾದ ದಲೈ ಲಾಮಾ ಅವರನ್ನು ಬಾಂಗ್ಲಾದೇಶದ ಜಮಾಯಿತ್ ಉಲ್ ಮುಜಾಯಿದ್ದೀನ್ (ಜೆಎಂಬಿ) ಉಗ್ರರು ಕರ್ನಾಟಕದಿಂದಲೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ದಲೈ ಲಾಮಾ ಜೊತೆಗೆ ಬಿಹಾರದ ರಾಜ್ಯಪಾಲ ಲಾಲ್ಜೀ ಮೆಂಡನ್, ಮೂರು ಐಇಡಿ(ಸುಧಾರಿತ ಸ್ಫೋಟಕ) ಹಾಗೂ ಎರಡು ಗ್ರೆನೇಡ್ಗಳನ್ನು ಸ್ಫೋಟಿಸಿ ಹತ್ಯೆಗೈಯ್ಯಲು ಐವರು ಉಗ್ರರ ಸಂಚು ರೂಪಿಸಿರುವುದನ್ನು ರಾಷ್ಟ್ರೀಯ ತನಿಖೆ ದಳ(ಎನ್ಐಎ) ಪತ್ತೆ ಮಾಡಿದೆ.
ಕಳೆದ ಆ.7ರಂದು ರಾಮನಗರದಲ್ಲಿ ಬಂಧಿತನಾಗಿದ್ದ ಜೆಎಂಬಿ ಉಗ್ರ ಮುನೀರ್ ಶೇಖ್ ಅಲಿಯಾಸ್ ಕೌಸರ್ ಎನ್ಐಎ ವಿಚಾರಣೆ ವೇಳೆ ಇದನ್ನು ಬಹಿರಂಗಪಡಿಸಿದ್ದಾನೆ.
ಈ ಬೆಳವಣಿಗೆಗಳ ನಡುವೆಯೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ವರದಿ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.
ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರನ ಜೊತೆ ಆತನ ಸಹಚರರಾದ ಪೈಗಂಬರ್ ಶೇಕ್, ಜಾಹಿಮುಲ್ ಇಸ್ಲಾಮ್, ಮುನೀರ್, ಅಸ್ಲಾಂ ಹಾಗೂ ಮೊಮಿನ್ ಎಂಬುವರೇ ದಲೈ ಲಾಮಾ ಮತ್ತು ಬಿಹಾರ ರಾಜ್ಯಪಾಲರನ್ನು ಸುಧಾರಿತ ಸ್ಫೋಟಕಗಳನ್ನು ಬಳಸಿ ಹತ್ಯೆಗೈಯ್ಯಲು ಸಂಚು ರೂಪಿಸಿದ್ದರು.
ಇನ್ನೆರಡು ದಿನಗಳಲ್ಲಿ ಎನ್ಐಎ ನ್ಯಾಯಾಲಯಕ್ಕೆ ದೋಷಾಪರೋಪ ಪಟ್ಟಿ(ಚಾರ್ಜ್ಶೀಟ್) ಸಲ್ಲಿಸಲಿದೆ.
ಕರ್ನಾಟಕದಿಂದಲೇ ಸ್ಕೆಚ್
2014ರಲ್ಲಿ ಬಿಹಾರದ ಬುದ್ಧಗಯಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೌಸರ್ನನ್ನು ಎನ್ಐಎ ಅಧಿಕಾರಿಗಳು ರಾಮನಗರದಲ್ಲಿ ಆ.7ರಂದು ಬಂಧಿಸಿದ್ದರು.
ರಾಮನಗರದಲ್ಲಿ ಬಟ್ಟೆ ವ್ಯಾಪಾರದ ಸೋಗಿನಲ್ಲಿ ಈತ ಅಲ್ಲಿಂದಲೇ ದಲೈಲಾಮಾ ಹಾಗೂ ಬಿಹಾರದ ರಾಜ್ಯಪಾಲರನ್ನು ಎರಡು ಸ್ಥಳಗಳಲ್ಲಿ ತನ್ನ ಸಹಚರರೊಂದಿಗೆ ಹತ್ಯೆಗೈಯ್ಯಲು ತಂತ್ರ ರೂಪಿಸಿದ್ದ.
ಪಶ್ಚಿಮ ಬಂಗಾಳದ ಮುಶಿರಾಬಾದ್ನ ನಿವಾಸಿಗಳಾದ ಅಹಮ್ಮದ್ ಪೈಗಂಬರ್ ಶೇಖ್ ಸೇರಿದಂತೆ ಮತ್ತಿತರರು ರಾಮನಗರಕ್ಕೆ ಅನೇಕ ಬಾರಿ ಭೇಟಿ ನೀಡಿ ಮಾತುಕತೆ ನಡೆಸಿದ್ದರು.
ಸಾರ್ವಜನಿಕ ಸ್ಥಳ ಇಲ್ಲವೇ ಏಕಾಂಗಿಯಾಗಿದ್ದ ವೇಳೆ ಸ್ಫೋಟಿಸಿ ಹತ್ಯೆಗೈಯುವುದು ಇವರ ಮುಖ್ಯ ಉದ್ದೇಶವಾಗಿತ್ತು. ಆದರೆ ಅವರಿಗೆ ಹೆಚ್ಚಿನ ಭದ್ರತೆ ಇದ್ದ ಕಾರಣ ಇವರ ಸಂಚು ವಿಫಲವಾಗಿತ್ತು.
ಹತ್ಯೆಗೆ ಕಾರಣವೇನು?
ಜೆಎಂವಿ ಉಗ್ರರು ದಲೈಲಾಮ ಅವರನ್ನು ಹತ್ಯೆಗೆ ಸಂಚು ರೂಪಿಸಿದ್ದು ಮುಖ್ಯ ಕಾರಣ. ಮ್ಯಾನ್ಮಾರ್ನ ರೊಹಿಂಗ್ಯ ನಿರಾಶ್ರಿತರ ಮೇಲಿನ ದೌರ್ಜನ್ಯ. ಮ್ಯಾನ್ಮಾರ್ನಲ್ಲಿ ಸೇನೆಯ ಕಾರ್ಯಾಚರಣೆ ನಂತರ ಇವರನ್ನು ಗಡಿಪಾರು ಮಾಡುತ್ತಿದ್ದಂತೆ ಭಾರತದ ಕಡೆ ವಲಸೆ ಬರುವ ಪ್ರಯತ್ನದಲ್ಲಿದ್ದರು.
ಟಿಬೆಟ್ ಮತ್ತು ಮ್ಯಾನ್ಮಾರ್ ನಡುವೆ ಸಂಬಂಧ ಹಲವು ವರ್ಷಗಳಿಂದಲೂ ತೀವ್ರ ಹದೆಗೆಟ್ಟಿದ್ದು, ಹಾವು-ಮುಂಗೂಸಿಯಂತಿದೆ. ಅದರಲ್ಲೂ ರೊಹಿಂಗ್ಯ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡುವುದಕ್ಕೆ ದಲೈ ಲಾಮಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ರೊಹಿಂಗ್ಯ ನಿರಾಶ್ರಿತರಲ್ಲಿ ಕೆಲವರು ಶಂಕಿತ ಉಗ್ರರು ಇರುವ ಕಾರಣ ಭಾರತದಲ್ಲಿ ಅವರಿಗೆ ಆಶ್ರಯ ಕಲ್ಪಿಸಿಕೊಟ್ಟರೆ ಮುಂದೊಂದು ದಿನ ದೇಶದ ಭದ್ರತೆಗೆ ಅಪಾಯ ಬಂದೊದಬಹುದೆಂದು ಕೇಂದ್ರಕ್ಕೆ ಅವರು ಸಲಹೆ ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ರೊಹಿಂಗ್ಯ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಲು ನಿರಾಕರಿಸಿತ್ತು. ಇದಕ್ಕೆ ಪ್ರತೀಕಾರವಾಗಿಯೇ ದಲೈಲಾಮಾ ಅವರನ್ನು ಹತ್ಯೆಗೈಯ್ಯಲು ಈ ಎಲ್ಲ ಉಗ್ರರು ಸಂಚು ರೂಪಿಸಿದ್ದರು.
ಎರಡು ಬಾರಿ ವಿಫಲ ಯತ್ನ
ದಲೈಲಾಮಾ ಅವರನ್ನು ಬಿಹಾರದ ಎರಡು ಕಡೆ ಈ ಉಗ್ರರು ಹತ್ಯೆ ಮಾಡಲು ಎರಡು ಬಾರಿ ವಿಫಲ ಯತ್ನ ನಡೆಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹತ್ಯೆಯ ಕಾರ್ಯಾಚರಣೆಗೆ ರಾಮನಗರ ಹಾಗೂ ಬೆಂಗಳೂರನ್ನೇ ಈ ಉಗ್ರರು ಕೇಂದ್ರ ಸ್ಥಾನವಾಗಿಟ್ಟುಕೊಂಡಿದ್ದರು.
ಮೂಲಗಳ ಪ್ರಕಾರ ರಾಮನಗರಕ್ಕೆ ಅನೇಕ ಬಾರಿ ಭೇಟಿ ನೀಡಿದ್ದ ಈ ಉಗ್ರರು ಹತ್ಯೆಗೆ ಬೇಕಾದ ಐಇಡಿ, ಗ್ರೆನೇಡ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಕಲೆ ಹಾಕಲು ಮುಂದಾಗಿದ್ದರು.