ಸಾಲದ ಸುಳಿಯಲ್ಲಿದ್ದ ಐಎಲ್ಎಫ್‌ಎಸ್‌ ಸರಕಾರದ ತೆಕ್ಕೆಗೆ

ಹೊಸದಿಲ್ಲಿ: ಸಾಲದ ಸುಳಿಯಲ್ಲಿ ಸಿಲುಕಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವೀಸಸ್ (ಐಎಲ್ ಆಂಡ್ ಎಫ್‌ಎಸ್‌) ಅನ್ನು ಸರಕಾರ ಸೋಮವಾರ ತನ್ನ ವಶಕ್ಕೆ ಪಡೆದುಕೊಂಡಿದ್ದು, ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಉದಯ್ ಕೊಟಕ್ ನೇತೃತ್ವದಲ್ಲಿ 6 ಮಂದಿ ಸದಸ್ಯರ ಸಮಿತಿ ರಚಿಸಿದೆ.

ಐಎಲ್ ಆಂಡ್ ಎಫ್‌ಎಸ್‌ ಷೇರುದಾರರು ಸಾಲದ ಸುಳಿಯಿಂದ ಸಂಸ್ಥೆಯನ್ನು ಪಾರುಮಾಡಲು ಸಮ್ಮತಿಸಿದ್ದು, ಅದರ ಅನ್ವಯ ಕೇಂದ್ರ ಸರಕಾರ ಸಂಸ್ಥೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಟೆಕ್ ಮಹೀಂದ್ರಾ ಮುಖ್ಯಸ್ಥ ವಿನೀತ್ ನಯ್ಯರ್, ಸೆಬಿ ಮಾಜಿ ಮುಖ್ಯಸ್ಥ ಜಿಎನ್ ಬಾಜಪೇಯಿ, ಐಸಿಐಸಿಐ ಬ್ಯಾಂಕ್‌ನ ಜಿಸಿ ಚತುರ್ವೇದಿ, ಮಾಜಿ ಐಎಎಸ್ ಅಧಿಕಾರಿಗಳಾದ ಮಾಲಿನಿ ಶಂಕರ್ ಮತ್ತು ನಂದ ಕಿಶೋರ್ ಮಂಡಳಿಯ ಇತರ ಸದಸ್ಯರಾಗಿದ್ದಾರೆ.

ನೂತನ ಸಮಿತಿಯು ಅ. 8ರಂದು ಸಭೆ ಸೇರಿ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದೆ. ನಂತರ ಮುಂದಿನ ಕ್ರಮಗಳ ಕುರಿತು ಚರ್ಚಿಸಲಿದ್ದು, ಅ. 31ರಂದು ಮತ್ತೆ ಸಭೆ ಸೇರಲಾಗುತ್ತದೆ.

ಸಂಸ್ಥೆ 91,000 ಕೋಟಿ ರೂ.ಗೂ ಅಧಿಕ ಮೊತ್ತದ ಸಾಲದ ಸುಳಿಯಲ್ಲಿ ಸಿಲುಕಿದೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ