ಬೆಂಗಳೂರು, ಅ.1- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ, ಆರ್ಎಸ್ಎಸ್ನಲ್ಲಿ ಗುರುತಿಸಿಕೊಂಡು ಅದರಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಏರ್ಪಡಿಸಿದ್ದ, ನಮ್ಮೊಳಗಿನ ಗಾಂಧಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ವಿಭಜನೆಯನ್ನು ವಿರೋಧಿಸಿದ್ದ ಆರ್ಎಸ್ಎಸ್ ಮಹಾತ್ಮ ಗಾಂಧೀಜಿ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿತ್ತು. ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತನ ವಿರುದ್ದ ನಾಥೂರಾಮ್ ಗೂಡ್ಸೆ ಈ ಸಂಘಟನೆಯಲ್ಲಿದ್ದುಕೊಂಡೇ ಗಾಂಧಿ ಅವರನ್ನು ಹತ್ಯೆ ಮಾಡಿದ ಎಂದು ದೂರಿದರು.
ಮಹಾತ್ಮ ಗಾಂಧೀಜಿ ಹತ್ಯೆಗೂ ಆರ್ಎಸ್ಎಸ್ಗೂ ಯಾವುದೇ ಸಂಬಂಧವಿಲ್ಲ. ನಾಥೂರಾಮ್ ಗೂಡ್ಸೆ ನಮ್ಮ ಸಂಘಟನೆಯ ಕಾರ್ಯಕರ್ತನಲ್ಲ ಎಂದು ಹೇಳಬಹುದು. ಆದರೆ ಅದರ ಮೇಲಿರುವ ಕಳಂಕ ಮಾತ್ರ ಎಂದಿಗೂ ದೂರವಾಗುವುದಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮ ಗಾಂಧೀಜಿ ಅನ್ನುವ ಸತ್ಯಾಗ್ರಹಿಯ ಹುಟ್ಟಿಗೆ ಕಾರಣವಾಯಿತು. ಗಾಂಧೀಜಿ ತನ್ನ ಹೋರಾಟಕ್ಕೆ ಇಟ್ಟುಕೊಂಡಂತಹ ದೇಶಪ್ರೇಮ ಅರ್ಥಪೂರ್ಣವಾಗಿತ್ತು. ತನ್ನ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲೇಬೇಕು ಎನ್ನುವ ಅಧಮ್ಯ ಉತ್ಸಾಹ ಅವರಲ್ಲಿತ್ತು.
ವಿದೇಶಿ ಉಡುಪುಗಳನ್ನು ತೊರೆಯಬೇಕು, ಸ್ವದೇಶಿ ಉಡುಪುಗಳನ್ನು ಧರಿಸ-ಬೇಕು. ಸ್ವದೇಶಿ ಆಂದೋಲನದ ಬಿಸಿಯನ್ನು ಬ್ರಿಟಿಷರಿಗೆ ಮುಟ್ಟಿಸಬೇಕೆಂಬ ಸದಾಶಯವು ಗಾಂಧಿ ತತ್ವದಲ್ಲಿ ಸೇರಿತ್ತು. ಆದರೆ ಕೇಂದ್ರ ಸರ್ಕಾರ ವಿದೇಶ ಬಂಡವಾಳಗಾರರಿಗೆ ಆದ್ಯತೆ ನೀಡಿ, ಸ್ವದೇಶಿ ಸಂಸ್ಕೃತಿ ನಾಶಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ವಿವಿಯ ಕುಲಪತಿ ಪೆÇ್ರ.ಎಸ್.ಜಾಫೆಟ್ ಮಾತನಾಡಿ, ಮಹಾತ್ಮ ಗಾಂಧಿಯವರ ಇಡೀ ಜೀವನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ನುಡಿದರು.
ನಿರುದ್ಯೋಗ ಸಮಸ್ಯೆ, ಬಡತನ, ಕೋಮುವಾದ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ.ಇದಕ್ಕೆ ಪರಿಹಾರಗಳನ್ನು ಗಾಂಧೀಜಿ ತತ್ವ ಗಳಿಂದ ಬಗೆಹರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿಯವರು ಅಹಿಂಸೆ, ಸತ್ಯಾಗ್ರಹ, ಅಸಹಕಾರದ ಮೂಲಕ ಬ್ರಿಟೀಷರಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಜೀವನದ ಕೊನೆಯ ವರೆಗೆ ಸಚ್ಚಾರಿತ್ರ್ಯ ಮತ್ತು ನೈತಿಕ ಮೌಲ್ಯಗಳಿಗೆ ಬದ್ಧರಾಗಿದ್ದರು. ಆದ್ದರಿಂದಲೇ ಅವರನ್ನು ಮಹಾತ್ಮ ಎಂದು ಗೌರವಿಸಲಾಗುತ್ತದೆ ಎಂದು ಹೇಳಿದರು.
ಸಂವಾದ ದಲ್ಲಿ ಕುಲಸಚಿವ(ಆಡಳಿತ) ಪೆÇ್ರ.ಎಂ.ರಾಮಚಂದ್ರಗೌಡ, ಕುಲಪತಿ (ಮೌಲ್ಯ ಮಾಪನ) ಪೆÇ್ರ.ಲಿಂಗರಾಜ ಗಾಂಧಿ ಸೇರಿದಂತೆ ಪ್ರಮುಖರಿದ್ದರು.