ಏರ್ ಶೋನಲ್ಲಿ ರಫೇಲ್ ಯುದ್ದ ವಿಮಾನ ಹಾರಾಟ ಇರುವುದಿಲ್ಲ: ಐಎಎಫ್

ಬೆಂಗಳೂರು, ಅ.1-ಉದ್ಯಾನನಗರಿಯಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ಏರ್ ಶೋನಲ್ಲಿ ಫ್ರಾನ್ಸ್ ಮೂಲದ ಭಾರತೀಯ ತಯಾರಿಕೆಯ ರಫೇಲ್ ಯುದ್ದ ವಿಮಾನ ಹಾರಾಟ ಇರುವುದಿಲ್ಲ ಎಂದು ಭಾರತೀಯ ವಾಯು ಪಡೆ(ಐಎಎಫ್) ತಿಳಿಸಿದೆ.

ಭಾರತಕ್ಕಾಗಿ ನಿರ್ಮಾಣವಾಗುತ್ತಿರುವ ರಫೇಲ್ ಫೈಟರ್ ಜೆಟ್ ಫೆಬ್ರವರಿ ವೇಳೆಗೆ ಸಿದ್ದವಾಗುವುದಿಲ್ಲ. ಹೀಗಾಗಿ ಅದು ಏರೋ ಇಂಡಿಯಾ ಶೋನಲ್ಲಿ ಆ ಮಾದರಿ ವಿಮಾನದ ಹಾರಾಟ ಇರುವುದಿಲ್ಲ. ಫೆ.20 ರಿಂದ 24ರವರೆಗೆ ನಡೆಯುವ ಈ ವಾಯು ಪ್ರದರ್ಶನದಲ್ಲಿ ಫ್ರಾನ್ಸ್‍ನ ಫೈಟರ್ ಜೆಟ್ ತಯಾರಿಕಾ ಸಂಸ್ಥೆ-ಡಸ್ಸೌಲ್ಟ್‍ನ ಇತರ ಕೆಲವು ರಫೇಲ್ ವಿಮಾನಗಳು ಹಾರಾಟ ನಡೆಸಬಹುದು ಎಂದು ಐಎಎಫ್ ಉಪ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಕೆ.ಸಿಂಗ್ ಬದೌರಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಡಸ್ಸೌಲ್ಟ್ ಏವಿಯೇಷನ್ ಸಂಸ್ಥೆಯು ಮುಂದಿನ ವರ್ಷ ಸೆಪ್ಟೆಂಬರ್ ನಂತರ ಭಾರತದಕ್ಕೆ 36 ರಫೇಲ್ ಬಹು ಆಯಾಮದ ಯುದ್ಧ ವಿಮಾನಗಳನ್ನು ಐಎಎಫ್‍ಗೆ ಫ್ಲೈ-ಅವೇ ಷರತ್ತು ಮೇಲೆ ಪೂರೈಸಲಿದೆ.
12ನೇ ಆವೃತಿಯ ವಿಶ್ವವಿಖ್ಯಾತ ಏರೋ ಇಂಡಿಯಾ ಶೋ, ಎಂದಿನಂತೆ ಬೆಂಗಳೂರಿನ ಐಎಎಫ್‍ನ ಯಲಹಂಕ ವಾಯು ನೆಲೆಯಲ್ಲಿ ಐದು ದಿನಗಳ ಕಾಲ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆ ಇದೆ.
ರಕ್ಷಣಾ ಪ್ರದರ್ಶನ ಸಂಘಟನೆ ಪ್ರಾಯೋಜಕತ್ವದಲ್ಲಿ ಏರೋ ಇಂಡಿಯಾ ಶೋನನ್ನು ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಡೆಟ್(ಎಚ್‍ಎಎಲ್) ನಡೆಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ