ಬೆಂಗಳೂರು,ಸೆ.29- ಎಸ್ಜಿಎಸ್ ವಾಗ್ದೇವಿ ಸಂಸ್ಥೆ ಶ್ರವಣ ನ್ಯೂನ್ಯತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅ.1ರಂದು ಉಚಿತ ವಾಕ್ ಶ್ರವಣ ಶಿಬಿರವನ್ನು ಆಯೋಜಿಸಿದೆ ಎಂದು ಶ್ರವಣ ತಜ್ಞ ಎಂಎಸ್ಜೆ ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಸಾಮೂಹಿಕ ಮಾಧ್ಯಮದ ಮೂಲಕ ಸಾರ್ವಜನಿಕ ಶಿಕ್ಷಣ, ಮಕ್ಕಳ ಶ್ರವಣ ದೌರ್ಬಲ್ಯ ಗುರುತಿಸುವುದು, ಕಿವುಡ ಮಕ್ಕಳ ಪೆÇೀಷಕರಿಗೆ ಭಾಷಾ ಚಿಕಿತ್ಸೆ ಕೌನ್ಸಿಲಿಂಗ್ ಪ್ರದರ್ಶನ ಏರ್ಪಡಿಸಲಾಗಿದ್ದು, ಶ್ರವಣ ನ್ಯೂನ್ಯತೆ ಕುರಿತು ಶಿಬಿರದಲ್ಲಿ ಉಚಿತವಾಗಿ ತಜ್ಞರ ಮಾರ್ಗದರ್ಶನ ಪಡೆಯಬಹುದು ಎಂದರು.
ಶೇ.10ರಷ್ಟು ನವಜಾತ ಶಿಶುಗಳ ಶ್ರವಣ ದೋಷದ ಅಪಾಯದಲ್ಲಿರುತ್ತವೆ. ಮಕ್ಕಳ ಶ್ರವಣ ನ್ಯೂನ್ಯತೆ ಗುರುತಿಸದಿದ್ದರೆ ಈ ಮಕ್ಕಳು ಮಾತು ಕಲಿಯಲು ತೊಡಕುಂಟಾಗಿ ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದುಳಿಯುತ್ತಾರೆ ಎಂದು ತಿಳಿಸಿದರು.
ಹುಟ್ಟಿನಿಂದ 3 ತಿಂಗಳವರೆಗೆ ಮಕ್ಕಳು ಶಬ್ದಗಳನ್ನು ಬೆಚ್ಚಿ ಬೀಳುವುದು ನಿದ್ದೆಯಿಂದ ಎಚ್ಚರಗೊಳ್ಳುತ್ತಾರೆ. 3ರಿಂದ 6 ತಿಂಗಳವರೆಗೆ ಮಗು ತಾಯಿಯ ಧ್ವನಿಗೆ ಪ್ರತಿಕ್ರಿಯಿಸುತ್ತಿದೆ. ತನ್ನಷ್ಟಕ್ಕೇ ತಾನೇ ಶಬ್ದ ಮಾಡಿ ಮನೆಯವರ ಗಮನ ಸೆಳೆಯುತ್ತದೆ. ಆದ್ದರಿಂದ 9 ತಿಂಗಳವರೆಗೆ ಮಗು ಶಬ್ದ ಮಾಡುವ ಆಟಿಕೆಗಳನ್ನು ಹೆಚ್ಚಾಗಿ ಇಷ್ಟಪಡುತ್ತವೆ.
9ರಿಂದ ಒಂದು ವರ್ಷದವರೆಗೆ ಮೊಟ್ಟ ಮೊದಲ ಪದ ಮಾತನಾಡಲು ಆರಂಭಿಸುತದೆ. ಈ ಎಲ್ಲ ಅಂಶಗಳಿಂದ ಶ್ರವಣ ಕೊರತೆಯನ್ನು ಗುರುತಿಸಬಹುದು ಎಂದು ತಿಳಿಸಿದರು.
ಶ್ರವಣ ದೋಷದ ಜಾಗೃತಿಗೆ ಶಿಬಿರ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 080-22237703, 26727141 ಸಂಪರ್ಕಿಸಲು ಕೋರಲಾಗಿದೆ.