ಬೆಂಗಳೂರು, ಸೆ.29- ವಿನೂತನ ಚಳವಳಿಗೆ ಹೆಸರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ಹುಟ್ಟುಹಬ್ಬವೂ ವಿನೂತನ ಮತ್ತು ವಿಶೇಷ.
ಕನ್ನಡಕ್ಕಾಗಿ ಹೋರಾಟ ಮಾಡಿದ ವಾಟಾಳ್ ಅವರನ್ನು ಕಳೆದ ಐದು ದಶಕಗಳ ಹಿಂದೆ ಪೆÇಲೀಸರು ಬಂಧಿಸಿ ಬೂಟಿನ ಏಟು ನೀಡಿದ ದಿನವನ್ನೇ ಸವಿನೆನಪಾಗಿರಿಸಿಕೊಂಡು ಆ ದಿನವನ್ನೇ ಹುಟ್ಟುಹಬ್ಬದ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ನಾಡಿನ ನ್ಯಾಯಕ್ಕಾಗಿ ನೆಲ, ಜಲ, ಸಂಸ್ಕøತಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿರುವ ವಾಟಾಳ್ ಅವರು ಹೋರಾಟದ ಐದು ದಶಕಗಳ ಹುಟ್ಟುಹಬ್ಬ ಇಂದು ಟೌನ್ಹಾಲ್ ಮುಂಭಾಗ ವಿಶೇಷವಾಗಿ ಜರುಗಿತು.
ಎಲ್ಲವನ್ನೂ ವಿನೂತನವಾಗಿ ಮಾಡುವ ಅವರು ಮುಗ್ಧ ಪ್ರಾಣಿಗಳಾದ ಕತ್ತೆಗಳಿಗೆ ಪಾದಪೂಜೆ ನೆರವೇರಿಸಿ ಹುಟ್ಟುಹಬ್ಬಕ್ಕೆ ಚಾಲನೆ ನೀಡಿದರು.
ಇವರ ಅಭಿಮಾನಿಗಳು, ಗೆಳೆಯರು, ಕನ್ನಡಪರ ಹೋರಾಟಗಾರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ನಾಡ ಸಂಸ್ಕøತಿಯನ್ನು ಬಿಂಬಿಸುವ ಜಾನಪದ ಕಲಾ ತಂಡಗಳು ಪ್ರದರ್ಶನ ನಡೆಸಿದವು. ನಂತರ ನಡೆದ ಕಾರ್ಯಕ್ರಮದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಬಿಜೆಪಿ ಹಿರಿಯ ಮುಖಂಡರಾದ ರಾಮಚಂದ್ರಗೌಡ, ಹಿರಿಯ ಕನ್ನಡಪರ ಹೋರಾಟಗಾರರಾದ ಟಿ.ಪಿ.ಪ್ರಸನ್ನಕುಮಾರ್, ಕನ್ನಡ ಸೇನೆಯ ಕೆ.ಆರ್.ಕುಮಾರ್, ಶಿವರಾಮೇಗೌಡ, ಕರವೇಯ ಪ್ರವೀಣ್ಕುಮಾರ್ ಶೆಟ್ಟಿ ಮುಂತಾದವರು ಪಾಲ್ಗೊಂಡು ವಾಟಾಳ್ ನಾಗರಾಜ್ ಅವರನ್ನು ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ಕೊನೆ ಉಸಿರಿರುವವರೆಗೂ ಕನ್ನಡಕ್ಕಾಗಿ ಹೋರಾಟ ಮಾಡುತ್ತೇನೆ. ಕಾವೇರಿ, ಮಹದಾಯಿ ಹೋರಾಟ, ಗಡಿನಾಡು ಕನ್ನಡಿಗರಿಗೆ ನ್ಯಾಯ, ಉತ್ತರ ಕರ್ನಾಟಕಕ್ಕಾದ ಅನ್ಯಾಯದ ವಿರುದ್ಧ ಧ್ವನಿ, ಹೈದರಾಬಾದ್-ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವುದು, ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿ ತಡೆಯುವುದು ಸೇರಿದಂತೆ ಎಲ್ಲ ಹೋರಾಟಗಳನ್ನು ನಿರಂತರವಾಗಿ ಮಾಡುವುದಾಗಿ ಹೇಳಿದರು.