ವಾರ್ತಾ ಮಿತ್ರ

ವಾರ್ತಾ ಮಿತ್ರ

ಕನ್ನಡಿಗರಿಗೆ ಕನ್ನಡದಲ್ಲಿ ವಾರ್ತೆಗಳು

  • ಮುಖಪುಟ
  • ಹೊಸ ಸುದ್ದಿಗಳು
  • ವಾಟ್ಸಪ್ಪ್ ವಿಡಿಯೋಗಳು
  • ರಾಜ್ಯ
  • ರಾಷ್ಟ್ರೀಯ
  • ಪ್ರಧಾನಿ ಮೋದಿ
  • ಸಿಎಂ ಬಿಯಸ್ವೈ
  • ರಾಜಕೀಯ
  • ಕ್ರೈಮ್
  • ವಾಣಿಜ್ಯ
  • ಕ್ರೀಡೆ
  • ಆರೋಗ್ಯ
  • ಧರ್ಮ – ಸಂಸ್ಕೃತಿ
  • ಮನರಂಜನೆ
  • ಕಾರ್ಯಕ್ರಮಗಳು
  • ಅಂತರರಾಷ್ಟ್ರೀಯ
  • ಅನ್ಯ ಭಾಷಿಯ ಸುದ್ದಿಗಳು
  • ಮತ್ತಷ್ಟು
  • ಲೇಖನಗಳು
  • ಜಾಹಿರಾತುಗಳು
  • ಬೆಂಗಳೂರು
  • ಹೈದರಾಬಾದ್ ಕರ್ನಾಟಕ
  • ಮುಂಬೈ ಕರ್ನಾಟಕ
  • ಮಧ್ಯ ಕರ್ನಾಟಕ
  • ಹಳೆ ಮೈಸೂರು
  • ಕರಾವಳಿ
Homeರಾಷ್ಟ್ರೀಯಐದು ಕೋಟಿ ಫೇಸ್ ಬುಕ್‌ ಖಾತೆಗಳು ಹ್ಯಾಕ್‌?: ಪಾಸ್ ವರ್ಡ್ ಬದಲಿಸುವ ಅಗತ್ಯವಿಲ್ಲ ಎಂದ ಜುಕರ್ ಬರ್ಗ್!

ಐದು ಕೋಟಿ ಫೇಸ್ ಬುಕ್‌ ಖಾತೆಗಳು ಹ್ಯಾಕ್‌?: ಪಾಸ್ ವರ್ಡ್ ಬದಲಿಸುವ ಅಗತ್ಯವಿಲ್ಲ ಎಂದ ಜುಕರ್ ಬರ್ಗ್!

September 29, 2018 Samachar Network-NP ರಾಷ್ಟ್ರೀಯ, ಅಂತರರಾಷ್ಟ್ರೀಯ Comments Off on ಐದು ಕೋಟಿ ಫೇಸ್ ಬುಕ್‌ ಖಾತೆಗಳು ಹ್ಯಾಕ್‌?: ಪಾಸ್ ವರ್ಡ್ ಬದಲಿಸುವ ಅಗತ್ಯವಿಲ್ಲ ಎಂದ ಜುಕರ್ ಬರ್ಗ್!
Seen By: 20

ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಸುಮಾರು 5 ಕೋಟಿಗೂ ಅಧಿಕ ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವ ಸಾಧ್ಯತೆಗಳಿವೆ ಎಂಬ ಸುದ್ದಿ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಪಾಸ್ ವರ್ಡ್ ಗಳ ಬದಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಖುದ್ದು ಫೇಸ್ ಬುಕ್ ಸಂಸ್ಥೆ ಹೇಳಿಕೆ ನೀಡಿದ್ದು, ಸುಮಾರು ಐದು ಕೋಟಿಗೂ ಅಧಿಕ ಬಳಕೆದಾರರ ಖಾತೆಗಳಲ್ಲಿ ಭದ್ರತಾ ಸಮಸ್ಯೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆ ನೀಡಿದೆ.

ಈ ಬಗ್ಗೆ ಫೇಸ್ ಬುಕ್ ಸಂಸ್ಥೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ಫೇಸ್‌ಬುಕ್‌ನ ‘ವ್ಯೂವ್‌ ಆ್ಯಸ್‌’ ಎಂಬ ಫೀಚರ್‌ ಅನ್ನು ಹ್ಯಾಕರ್‌ಗಳು ಕದ್ದಿರುವ ಶಂಕೆ ಇದೆ. ಇದರಿಂದ ಹ್ಯಾಕರ್ ಗಳು ಸುಲಭವಾಗಿ ಜನರ ಖಾತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದು. ಈಗ ತಾನೇ ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಫೇಸ್‌ಬುಕ್‌ ಖಾತೆಗಳು ದುರುಪಯೋಗವಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಅಂತೆಯೇ ಇದೇ ವಿಚಾರವಾಗಿ ಫೇಸ್ ಬುಕ್ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಆತಂಕ ವ್ಯಕ್ತಪಡಿಸಿದ್ದು, ಬಳಕೆದಾರರು ತಮ್ಮ ಪ್ರೊಫೈಲ್‌ ಇತರರಿಗೆ ಹೇಗೆ ಕಾಣಲಿದೆ ಎಂಬುದನ್ನು ವೀಕ್ಷಿಸಲು ‘ವ್ಯೂವ್‌ ಆ್ಯಸ್‌’ ಫೀಚರ್‌ ಇದೆ. ಆದರೆ ಇದನ್ನು ಹ್ಯಾಕ್ ಮಾಡಿರುವ ಶಂಕೆ ಇದೆ. ಆದರೆ ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಖಾತೆಯ ಪಾಸ್ ವರ್ಡ್ ಗಳನ್ನೂ ಬದಲಿಸುವ ಅಗತ್ಯವಿಲ್ಲ ಎಂದು ಜುಕರ್ ಬರ್ಗ್ ಹೇಳಿದ್ದಾರೆ.

ಇದೇ ವೇಳೆ ತಾವು ಈ ಸಂಬಂಧ ಎಫ್ ಬಿಐ ನಿರಂತರ ಸಂಪರ್ಕದಲ್ಲಿದ್ದು, ಹ್ಯಾಕರ್ ಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ಭದ್ರತಾ ಲೋಪದ ಕುರಿತು ಸಂಸ್ಥೆಯಲ್ಲೇ ಆಂತರಿಕ ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

 

  • facebook account hake

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ

Previous

ಪಾಕ್​ ವಿರುದ್ಧ ಮೊತ್ತೊಂದು ಸರ್ಜಿಕಲ್​​​ ಸ್ಟ್ರೈಕ್? ರಾಜ್​ನಾಥ್​ ಸಿಂಗ್​ ನಿಗೂಢ ಹೇಳಿಕೆ!

Next

ಠಾಣೆಗೆ ಬಂತು ಮತ್ತೊಂದು ರುಂಡ !!; ಬೆಚ್ಚಿ ಬಿದ್ದ ಮಂಡ್ಯದ ಜನತೆ 

ಬಾಗಲಕೋಟೆ

  • ಪ್ರಧಾನ ಮಂತ್ರಿ ಮೋದಿ ಅವರ ದೂರದೃಷ್ಠಿಯ ಫಲ: ರೈತರು ಮತ್ತು ಸಕ್ಕರೆ ಕಾರ್ಖಾನೆಗೆ ಹೆಚ್ಚು ಅನುಕೂಲ 2025ಕ್ಕೆ ಶೇ.25ರಷ್ಟು ಇಥೆನಾಲ್ ಉತ್ಪಾದನೆ ಗುರಿ
  • ಜನರು ಕೊಟ್ಟ ತೀರ್ಪು ಸ್ವಾಗತಿಸುತ್ತೇವೆ: ಸಿದ್ದರಾಮಯ್ಯ
  • ಗ್ರಾಮೀಣ ಪ್ರದೇಶದಲ್ಲಿ ಕುಸಿಯುತ್ತಿರುವ ಮನೆಗಳು
more...change

ಹೊಸ ಸುದ್ದಿ

  • ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
    August 11, 2021 Comments Off on ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
  • ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
    August 11, 2021 Comments Off on ರಾಜಕಾರಣದಲ್ಲಿನ ಅಪರಾಧಿಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠಗಳು ಇಂದು ನೀಡಿರುವ ಎರಡು ಮಹತ್ವದ ಆದೇಶಗಳು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿವೆ.
  • ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
    August 11, 2021 Comments Off on ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
  • ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
    August 11, 2021 Comments Off on ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ : ಡಿ.ಕೆ.ಶಿವಕುಮಾರ್
  • ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ
    August 11, 2021 Comments Off on ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ

ನಿಮ್ಮ ಜಾಹಿರಾತುಗಳನ್ನು ಇಲ್ಲಿ ಪ್ರದರ್ಶಿಸಲು ಸಂಪರ್ಕಿಸಿ ವಾರ್ತಾ ಮಿತ್ರ 7022937357

ಜಾಹೀರಾತು


ಸಂಪರ್ಕ (ಕನೆಕ್ಟ್) ಮಿತ್ರ

ಅಮೋಘಾ ಮಾಧ್ಯಮ ಸೇವೆಗಳು

ಸಮಾಚಾರ ನೆಟ್ವರ್ಕ್
  • ಸೈಟ್ ವೀಕ್ಷಣೆಗಳು
  • ಜಾಹೀರಾತು
  • ನಮ್ಮ ಸಂಪರ್ಕ
  • ನಮ್ಮ ಜೊತೆಗಾರರು
  • ಗೌಪ್ಯತಾ ನೀತಿ
  • ಸೈಟ್ ನಕ್ಷೆ
  •                                     

Copyright © 2018 | Varta Mitra. All Rights Reserved

ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ