ಬೆಂಗಳೂರು: ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಜೈಲು ಸೇರಿರುವ ದುನಿಯಾ ವಿಜಯ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸೆಷನ್ ಕೋರ್ಟ್ ಮುಂದೆ ಬರಲಿದ್ದು, ಇಂದಾದರೂ ವಿಜಯ್ಗೆ ಜಾಮೀನು ಸಿಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.
ಪ್ರಕರಣ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ ವಿಜಯ್ ಪರ ವಕೀಲರು ಸೆಷನ್ ಕೋರ್ಟ್ ಮೊರೆ ಹೋಗಿದ್ದರು. ಲ್ಯಾಬ್ ರಿಪೋರ್ಟ್ ಹಾಗೂ ಮಾರುತಿಗೌಡ ಹೆಲ್ತ್ ರಿಪೋರ್ಟ್ ಬರದ ಹಿನ್ನೆಲೆ ಹಾಗೂ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಕಾಲಾವಕಾಶ ನೀಡಿ ವಿಚಾರಣೆ ನೀಡಿ ಇಂದಿಗೆ ಮುಂದೂಡಿಕೆಯಾಗಿತ್ತು. ಇದರಂತೆ ಇಂದು ಮಧ್ಯಾಹ್ನ ಬಳಿಕ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ದುನಿಯಾ ವಿಜಯ್ಗೆ ಜಾಮೀನು ಸಿಗುವುದೇ ಎಂಬುವುದೇ ಸದ್ಯದ ಕುತೂಹಲವಾಗಿದೆ.