ದುಬೈ: ಕ್ರಿಕೆಟ್ ಜಗತ್ತು ಕಾತರದಿಂದ ಕಾದು ಕುಳಿತಿರುವ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಏಳನೇ ಬಾರಿಗೆ ಟ್ರೋಫಿ ಮೇಲೆ ಕಣ್ಣಿಟ್ಟರೆ ಇತ್ತ ಮೊರ್ತಾಜಾ ಪಡೆ ಚೊಚ್ಚಲ ಏಷ್ಯಾಕಪ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ.
ಟೂರ್ನಿಯಲ್ಲಿ ಐದು ಪಂದ್ಯಗಳನ್ನ ಸೋಲದೇ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ತಂಡ ಎನಿಸಿದೆ. ಇನ್ನು ಬಾಂಗ್ಲಾ ತಂಡ ಏಷ್ಯಾಕಪ್ ಇತಿಹಾಸದಲ್ಲಿ ಎರಡು ಬಾರಿ ಫೈನಲ್ ತಲುಪಿದರೂ ಒಮ್ಮೆಯೂ ಕೂಡ ಪ್ರಶಸ್ತಿ ಗೆದ್ದಿಲ್ಲ.
ಟೀಂ ಇಂಡಿಯಾದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಶಿಖರ್ ಧವನ್ ಭಜ್ರಿ ಫಾರ್ಮ್‍ನಲ್ಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್‍ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ತಂಡದ ಪ್ರಮುಖ ಬೌಲರ್‍ಗಳಾಗಿದ್ದಾರೆ.
ಬಾಂಗ್ಲಾ ಪರ ಮುಷುಫೀಕುರ್ ರಹೀಂ, ಮಿಥುನ್ ಮೊಹ್ಮದ್, ನಾಯಕ ಮೊರ್ತಾಜಾ ಮತ್ತು ಮೊಹ್ಮದುಲ್ಲಾ ತಂಡದ ಬ್ಯಾಟಿಂಗ್ ಎಲುಬಾಗಿದ್ದಾರೆ. ಇನ್ನು ಬೌಲಿಂಗ್‍ನಲ್ಲಿ ಡಿಪಾರ್ಟ್‍ಮೆಂಟ್‍ನಲ್ಲಿ ಎಡಗೈ ವೇಗಿ ಮುಸ್ತಾಫೀಜುರ್ ರಹೀಂ, ಶೆಹಾದಿ ಅಹ್ಮದಿ ತಂಡದ ಬೌಲರ್‍ಗಳಾಗಿದ್ದಾರೆ.