ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ; ಪತ್ನಿಗೆ ಪತಿಯು ಮಾಲೀಕನಲ್ಲ: ಸುಪ್ರೀಂ ಕೋರ್ಟ್

ನವದೆಹಲಿ:  ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿರುವ ಸರ್ವೋಚ್ಛ ನ್ಯಾಯಾಲಯ, ಪತ್ನಿಗೆ ಪತಿಯೇ ಮಾಲಿಕನಲ್ಲ, ಮಹಿಳೆ-ಪುರುಷರು ಇಬ್ಬರು ಸಮಾನರು ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ.

ಸೆಕ್ಷನ್ 497ರ ಅಸಾಂವಿಧಾನಿಕ  ತೀರ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ,  ಅನೈತಿಕ ಸಂಬಂಧದ ಕುರಿತು ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕಾನೂನಿನ ಪ್ರಕಾರ,  ಗಂಡನೇ ಎಲ್ಲದಕ್ಕೂ ಮುಖ್ಯಸ್ಥನಲ್ಲ, ಮಹಿಳೆಗೂ ಗೌರವ ತೋರಬೇಕು. ಮಹಿಳೆಯರ ಜೊತೆ ಅಗೌರವದ ವರ್ತನೆ ಸರಿಯಲ್ಲ, ಮಹಿಳೆಯರಿಗೆ ಅಗೌರವ ತೋರುವ ಕಾನೂನು ಸಾಂವಿಧಾನಿಕವಲ್ಲ ಎಂದು ದೀಪಕ್ ಮಿಶ್ರ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ ಅಭಿಪ್ರಾಯ ಪಟ್ಟಿದೆ.

ಪತ್ನಿಯ ಪ್ರಿಯಕರನ ಬಗ್ಗೆ ಪ್ರಶ್ನಿಸುವ ವಿಚಾರಿಸುವ ಹಕ್ಕು ಪತಿಗೆ ಇದೆ ಎಂದಾದರೇ, ಪತಿಯ ಪ್ರಿಯತಮೆಯ ಬಗ್ಗೆ ವಿಚಾರಣೆ ನಡೆಸುವ ಹಕ್ಕು ಪತ್ನಿಗೇಕಿಲ್ಲ , ಕಾನೂನಿನ ಪ್ರಕಾರ, ಮಹಿಳೆಗೆ ತನ್ನ ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಇದೆ, ಆದರೆ ಅದು ಸರಿಯಲ್ಲ, ಪತ್ನಿಗೂ ಪ್ರಶ್ನಿಸುವ ಅಧಿಕಾರವಿದೆ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿದೆ. ಪತಿ ಅವಿವಾಹಿತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾನೆಯೇ ಇಲ್ಲವೇ ಎಂಬುದು ಪರಿಗಣನೆಗೆ ಇಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ಪ್ರಾಣಾಪಾಯ ತರದ ವಿವಾಹ ಬಾಹಿರ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಹೇಳುವ ಮೂಲಕ, 150 ವರ್ಷದ ಹಳೇಯ ಕಾನೂನನ್ನು ಅಸಂವಿಧಾನಿಕ ಎಂದು ಹೇಳಿದೆ. ವಿವಾಹ ಬಾಹಿರ ಸಂಬಂಧ ತೀರಾ ಖಾಸಗಿ ವಿಚಾರವಾಗಿದ್ದು, ಅನೇಕ ದೇಶಗಳು ಇದನ್ನು ಅಪರಾಧ ಮುಕ್ತಗೊಳಿಸಿವೆ.

ಐಪಿಸಿ ಸೆಕ್ಷನ್ 407 ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸಂವಿಧಾನ ಪೀಠ  ನಡೆಸಿತ್ತು. ವಿವಾಹದ ಪಾವಿತ್ರ್ಯತೆ ಕಾಪಾಡಲು ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ