ಬೆಂಗಳೂರು,ಸೆ.27- ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ನಾಳೆ 11.30ಕ್ಕೆ ಬಿಬಿಎಂಪಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆಯಲಿರುವ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಸ್ಥಾನ ಸಾಮಾನ್ಯಮಹಿಳೆಗೆ ಹಾಗೂ ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಬಿಬಿಎಂಪಿ ಸದಸ್ಯರು 198, ರಾಜ್ಯಸಭಾ ಸದಸ್ಯರು 09, ಲೋಕಸಭಾ ಸದಸ್ಯರು 05 ವಿಧಾನಪರಿಷತ್ ಸದಸ್ಯರು 19, ಬೆಂಗಳೂರಿನ ಎಂಎಲ್ಎಗಳು 28 ಮತದಾನದ ಹಕ್ಕನ್ನು ಹೊಂದಿದ್ದಾರೆ. ಒಟ್ಟು 259 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ ಎಂದು ವಿವರಿಸಿದರು.
ನಾಳೆ ಬೆಳಗ್ಗೆ 8ರಿಂದ 9.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೇ. ಸಮಯಕ್ಕೆ ಎಲ್ಲರೂ ಬಂದು ನಿಗದಿತ ಆಸನದಲ್ಲಿ ಕುಳಿತುಕೊಳ್ಳಲು ಅವರು ಮನವಿ ಮಾಡಿದರು.
ಚುನಾವಣೆ ವೇಳೆ ಕೆಲವೊಂದು ನಿರ್ಬಂಧ ಹೇರಿದ್ದು, ಪಾಸ್ ಹೊಂದಿರುವವರಿಗೆ ಮಾತ್ರ ಒಳಪ್ರವೇಶಕ್ಕೆ ಅವಕಾಶವಿದೆ. ಪೆÇಲೀಸ್ ಬಂದೋಬಸ್ತ್ನಲ್ಲಿ ಚುನಾವಣೆ ನಡೆಯಲಿದೆ ಎಂದರು.
12 ಸ್ಥಾಯಿ ಸಮಿತಿಯ ಅವಧಿ ಇನ್ನು ಮುಕ್ತಾಯವಾಗಿಲ್ಲ. ಹಾಗಾಗಿ ಆ ಸ್ಥಾನಗಳಿಗೆ ನಂತರದಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಕಳಸದ್ ತಿಳಿಸಿದರು.