ಬೆಂಗಳೂರು, ಸೆ.27- ಭಾರತದ ಮೊದಲ ಆನ್‍ಲೈನ್ ಮಾರುಕಟ್ಟೆ ಸ್ಥಳವಾದ – ಶಾಪ್‍ಕ್ಲ್ಯೂಸ್ ಹಬ್ಬದ ವಾತಾವರಣವನ್ನು ಮತ್ತಷ್ಟು ವಿಶೇಷವಾಗಿಸಲು ಉತ್ಸಾಹಪೂರ್ಣ ಮೆಗಾ ಮಹಾಭಾರತ್ ದಿವಾಲಿ ಸೇಲ್ (ಮಹಾಭಾರತ ದೀಪಾವಳಿ ಮಾರಾಟ) ಆರಂಭಿಸಲು ಸಜ್ಜಾಗಿದೆ.
ಶಾಪ್ ಕ್ಲ್ಯೂಸ್‍ನ ಸಹಸ್ಥಾಪಕರು ಮತ್ತು ಮುಖ್ಯ ಉದ್ಯಮಾಧಿಕಾರಿ, ಸಹಸ್ಥಾಪಕರಾದ ರಾಧಿಕಾ ಘಾಯ್ ಈ ಬಗ್ಗೆ ವಿವರ ನೀಡಿ, ಅಕ್ಟೋಬರ್ 10ರಿಂದ ನವೆಂಬರ್ 7ವರೆಗೆ ಮೂರು ಹಂತಗಳಲ್ಲಿ ನಡೆಯಲಿರುವ ಈ ಮೆಗಾ ಮಾರಾಟ ವಿಸ್ತಾರವಾದ ಶ್ರೇಣಿಯ ಉತ್ಪನ್ನಗಳನ್ನು ಶೇ.50-80ರಷ್ಟು ರಿಯಾಯಿತಿಯಲ್ಲಿ ಸಾದರಪಡಿಸುತ್ತಿದೆ. ಫ್ಯಾಷನ್ ಮತ್ತು ಜೀವನಶೈಲಿ, ಗೃಹ ಮತ್ತು ಅಡುಗೆಮನೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರಿಗಳ ವರ್ಗಗಳಲ್ಲಿ ಈ ಕೊಡುಗೆ ಸಾದರಪಡಿಸಲಾಗುತ್ತಿದೆ.
ಗ್ರಾಹಕರಿಗೆ ವೈವಿಧ್ಯಮಯ ಆಯ್ಕೆಯ ಅವಕಾಶ ನೀಡುವುದಕ್ಕಾಗಿ ಶಾಪ್‍ಕ್ಲ್ಯೂ ತನ್ನದೇ ಆದ ಪ್ರತ್ಯೇಕ ಹೋಮ್ ಲೇಬಲ್‍ಗಳ ಶ್ರೇಣಿಯನ್ನು ಕೂಡ ಬಿಡುಗಡೆ ಮಾಡಲಿದೆ. ಸಂಸ್ಥೆಯ ಇನ್‍ಹೌಸ್ ಬ್ರಾಂಡ್‍ಗಳಾದ 29ಕೆ, ಮಿಯಾ ಮತ್ತು ಕೋಡ್ ಯೆಲ್ಲೋಗಳ ಉತ್ಪನ್ನಗಳನ್ನು ಫ್ಯಾಶನ್ ವರ್ಗದಲ್ಲಿ, ಡಿಜಿಮೇಟ್ ಬ್ರಾಂಡ್‍ನಲ್ಲಿ ಟೆಲಿವಿಷನ್‍ಗಳನ್ನು ಮತ್ತು ಮನೆಯ ಆರೈಕೆ ಅಂದರೆ ಹೋಮ್ ಕೇರ್ ವಿಭಾಗದಲ್ಲಿ ಹೋಮ್ ಬೆರ್ರಿ ಮತ್ತು ನೂತನ ಕಿಚನ್ ಐಡಲ್ ಬ್ರಾಂಡ್‍ಗಳನ್ನು ಸಾದರಪಡಿಸಲಾಗುತ್ತಿದೆ ಎಂದರು.
ಈ ದೀಪಾವಳಿಯಲ್ಲಿ ಎಲ್ಲವೂ ಹೊಸದನ್ನೇ ಖರೀದಿಸಿ ಎಂಬುದು ಈ ಮೇಳದ ಘೋಷಣೆಯಾಗಿದೆ. 10,000 ವ್ಯಾಪಾರಿಗಳೊಂದಿಗೆ ಈ ಮಾರುಕಟ್ಟೆ ಸ್ಥಳ ಒಪ್ಪಂದ ಮಾಡಿಕೊಂಡಿದ್ದು ಉತ್ಸಾಹ ಪೂರ್ಣ ಡೀಲ್‍ಗಳು ಮತ್ತು ವಿಶೇಷ ರಿಯಾಯಿತಿಗಳನ್ನು ದೀಪಾವಳಿಯುದ್ದಕ್ಕೂ ನೀಡಲಿದೆ ಎಂದರು.