ಬೆಂಗಳೂರು, ಸೆ.27- ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೆÇಲೀಸರು 25ಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಅವರನ್ನು ಸಿಸಿಬಿ ಕಚೇರಿಗೆ ಕರೆತಂದು ಪರೇಡ್ ನಡೆಸಿದ್ದಾರೆ.
ರೌಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನಿಷೇಧಿತ ನೋಟುಗಳು, ಮಾರಕಾಸ್ತ್ರಗಳು, ಚಿನ್ನಾಭರಣ, ಪಿಸ್ತೂಲ್ ಸೇರಿದಂತೆ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಕಾರ್ಯಾಚರಣೆ ಇದಾಗಿದ್ದು, ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಅವರು 11ವಿಶೇಷ ತಂಡಗಳನ್ನು ರಚಿಸಿದ್ದರು.
ಅದರಂತೆ ಇಂದು ಮುಂಜಾನೆ 5 ಗಂಟೆಯಿಂದ ಕಾರ್ಯಾಚರಣೆ ನಡೆಸಿದ ತಂಡ, ಕುಖ್ಯಾತ ರೌಡಿ ಲೋಕೇಶ್ ಅಲಿಯಾಸ್ ಮುಲಾಮ, ಕೊಮ್ಮಘಟ್ಟ ಮಂಜ, ಲಕ್ಷ್ಮಣ, ಮಾಹಿಮ್, ಜಾಂಟಿ, ಲಕ್ಕಸಂದ್ರ ವಿಜಿ, ರಾಬರಿ ಗಿರಿ, ತೊದಲ ಮಂಜ, ಮೈಕಲ್ ಡಿಸೋಜಾ, ಜೆ.ಸಿ.ರೋಡ್ ಶಂಕರ, ಅಪ್ಪು ಕೊಡಿಗೇಹಳ್ಳಿ, ಗಾಳಿ ರವಿ, ಜೆಸಿಬಿ ನಾರಾಯಣ, ದಡಿಯಾ ಮಹೇಶ್ ರವಿ ಅಲಿಯಾಸ್ ದೂದ್ ರವಿ, ಬೆತ್ತನಗೆರೆ ಶಂಕರ್, ಜಗದೀಶ್ ಅಲಿಯಾಸ್ ಮಾರೇನಹಳ್ಳಿ ಜಗ್ಗ, ವೇಡಿಯಪ್ಪನ್ ಅಲಿಯಾಸ್ ವೇಡಿ, ಅತೂಷ್, ರಾಜಾ ಕುಟ್ಟಿ, ತಿರುಮಾರನ್ ಅಲಿಯಾಸ್ ಕುಟ್ಟಿ, ತನ್ವೀರ್, ಪಪ್ಪು ಅಲಿಯಾಸ್ ಅಮೀರ್ ಖಾನ್ ಮುಂತಾದ ರೌಡಿಗಳ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತು.
ಪರಿಶೀಲನೆಯ ವೇಳೆ ರೌಡಿಗಳ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 100ರಿಂದ 120 ವಿವಿಧ ಸ್ವತ್ತು, ಜಮೀನುಗಳಿಗೆ ಸಂಬಂಧಿಸಿದ ದಾಖಲಾತಿಗಳು, ಚೆಕ್‍ಗಳು, 14 ಮೊಬೈಲ್ ಫೆÇೀನ್, 300 ಗ್ರಾಂ ಚಿನ್ನ, 1ಫೆÇೀರ್ಡ್ ಕಾರು, ಒಂದು ಸ್ವಿಫ್ಟ್ ಕಾರು, 1 ಫಾರ್ಚೂನರ್ ಕಾರು ಸೇರಿದಂತೆ 3 ಕಾರುಗಳು, 2 ನಗದು ಎಣಿಕಾ ಯಂತ್ರ, 500 ರೂ. ಮುಖಬೆಲೆಯ 2.20 ಲಕ್ಷ ರೂ. ನಿಷೇಧಿತ ಹಾಗೂ ನಕಲಿ ನೋಟುಗಳು, ಕೃತ್ಯ ನಡೆಸಲು ಇಟ್ಟುಕೊಂಡಿದ್ದ ಒಂದು ನಕಲಿ ಪಿಸ್ತೂಲ್, 7 ಚಾಕು, 2 ತಲ್ವಾರ್, 3 ಮಚ್ಚು ಮುಂತಾದ ಮಾರಕಾಸ್ತ್ರಗಳನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ರೌಡಿ ದಡಿಯಾ ಮಹೇಶ್‍ನ ಮನೆಯಲ್ಲಿ 6 ಕೋಬ್ರಾ ಸ್ಟ್ರೇ ಟಿನ್ಸ್ ಹಾಗೂ ಒಂದು ನಕಲಿ ಪಿಸ್ತೂಲ್ ಸಿಕ್ಕಿದೆ.
ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಹೆಚ್ಚುವರಿ ಪೆÇಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪ ಪೆÇಲೀಸ್ ಆಯುಕ್ತ ಗಿರೀಶ್ ಅವರ ಉಸ್ತುವಾರಿಯಲ್ಲಿ ಸಿಸಿಬಿ ವಿಭಾಗದ ಸಹಾಯಕ ಆಯುಕ್ತರಾದ ವಿ.ಮರಿಯಪ್ಪ, ಪಿ.ಟಿ.ಸುಬ್ರಹ್ಮಣ್ಯ, ಮೋಹನ್ ಮಂಜುನಾಥ್ ಚೌದರಿ, ಎಚ್.ಎನ್. ವೆಂಕಟೇಶ್ ಪ್ರಸನ್ನ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.