ಮೀರತ್: ಮುಜಾಫರ್ನಗರ ದಂಗೆ ಪ್ರಕರಣದ ಆರೋಪಿ ಬಿಜೆಪಿ ಎಂಎಲ್ಎ ಸಂಗೀತ್ ಸೋಮ್ ಅವರ ಮನೆ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದೆ.
ಲಾಲ್ಕುರ್ತಿ ಪ್ರದೇಶದಲ್ಲಿರುವ ಬಿಜೆಪಿ ಎಂಎಲ್ಎ ಮನೆಯ ಮೇಲೆ ತಡ ರಾತ್ರಿ 1 ಗಂಟೆ ವೇಳೆ ಈ ದಾಳಿ ನಡೆದಿದ್ದು, ಎಂಎಲ್ಎ ಸಂಗೀತ್ ಸೋಮ್ ಅವರು ಮನೆಗೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ತನಿಖೆ ಪ್ರಾರಂಭಿಸಲಾಗಿದೆ ಎಂದು ಎಸ್ಎಸ್ಪಿ ಅಖಿಲೇಶ್ ಕುಮಾರ್ ತಿಳಿಸಿದ್ದಾರೆ.
ಇದು ಭಯೋತ್ಪಾದಕರು ನಡೆಸಿದ ದಾಳಿಯಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದಲೇ ತಿಳಿದಿದೆ. ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು, ಬಾಂಬ್ ವಿಲೇವಾರಿ ತಂಡ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಎಸ್ಎಸ್ಪಿ ಮಾಹಿತಿ ನೀಡಿದ್ದಾರೆ.
ಎಂಎಲ್ಎ ಸೋಮ್ ಅವರು 2013ರ ಮುಝಾಫರ್ನಗರದ ಹಿಂದು-ಮುಸ್ಲಿಂ ದಂಗೆಯ ಆರೋಪಿಯಾಗಿದ್ದು, Z ಕೆಟಗರಿ ಭದ್ರತೆ ಹೊಂದಿದ್ದಾರೆ.