ಸಂಭಾವ್ಯ ಅಸುರಕ್ಷಿತ ಸವಾರಿಯನ್ನು ನಿರ್ಣಯಿಸಲು ಓಲಾ, ಗಾರ್ಡಿಯನ್

ಬೆಂಗಳೂರು, ಸೆ.26- ವಿಶ್ವದ ಅತಿದೊಡ್ಡ ರೈಡ್-ಹೇಲಿಂಗ್ ವೇದಿಕೆಗಳಲ್ಲಿ ಒಂದಾದ ಓಲಾ, ತನ್ನ ಗ್ರಾಹಕರಿಗೆ ಪ್ರಯಾಣ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ¿ಗಾರ್ಡಿಯನ್¿ ಎಂಬ ನೈಜ-ಸಮಯದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ.
ಬೆಂಗಳೂರು, ಮುಂಬೈ ಮತ್ತು ಪುಣೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯು, ಸುರಕ್ಷತೆಯ ಕುರಿತಾದ, ಓಲಾದ ರಾಷ್ಟ್ರೀಯ ಕಾರ್ಯಕ್ರಮ `ಸ್ಟ್ರೀಟ್ ಸೇಫ್’ ನ ಭಾಗವಾಗಿದೆ, ಮತ್ತು ರೈಡ್ ಹಂಚಿಕೆ ಉದ್ಯಮದಲ್ಲಿ ಇದು ಮೊದಲ ಪ್ರಾಯೋಗಿಕ ಯೋಜನೆಯಾಗಿದೆ. ಗಾರ್ಡಿಯನ್ ಮುಂದಿನ ತಿಂಗಳ ಕೊನೆಯಲ್ಲಿ ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಚಾಲನೆಗೆ ಬರಲಿದೆ ಮತ್ತು ಈ ವರ್ಷದ ಕೊನೆಯಲ್ಲಿ ಇತರ ನಗರಗಳಲ್ಲೂ ಚಾಲನೆಗೆ ಬರಲಿದೆ.

ಗಾರ್ಡಿಯನ್ ಯೋಜನೆಯ ಭಾಗವಾಗಿ, ಮಾರ್ಗ ಬದಲಾವಣೆಗಳನ್ನು, ಅನಿರೀಕ್ಷಿತ ಮತ್ತು ಮಾರ್ಗದ ನಡುವಿನ ನಿಲ್ದಾಣಗಳನ್ನು ಒಳಗೊಂಡಂತೆ ಸವಾರಿ ಸೂಚಕಗಳನ್ನು ವಿಶ್ಲೇಷಿಸುವುದರ ಮೂಲಕ ಎಲ್ಲಾ ಪ್ರಯಾಣಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಸೂಚಕಗಳು ಮತ್ತು ಪ್ರಯಾಣದ ಸಮಯದ ಆಧಾರದ ಮೇಲೆ, ಸುರಕ್ಷತಾ ಟ್ರಿಗ್ಗರ್‍ಗಳನ್ನು ರಚಿಸಲಾಗುವುದು, ಇವುಗಳು ತಕ್ಷಣವೇ ಓಲಾದ ಸುರಕ್ಷತಾ ತಂಡ (ಸೆಫ್ಟಿ ರೆಸ್ಪಾನ್ಸ್ ಟೀಮ್) ಕ್ಕೆ ಕಳುಹಿಸಲಾಗುವುದು .ಡೇಟಾವನ್ನು ವಿಶ್ಲೇಷಿಸಿದ ನಂತರ, ಸುರಕ್ಷತಾ ಪ್ರತಿಕ್ರಿಯೆ ತಂಡ ಯಾವುದೇ ಸಂಭಾವ್ಯ ಅಸುರಕ್ಷಿತ ಸವಾರಿಯನ್ನು ನಿರ್ಣಯಿಸಲು ಮತ್ತು ಅಗತ್ಯವಿರುವ ಸಹಾಯವನ್ನು ಒದಗಿಸಲು ಗ್ರಾಹಕರನ್ನು ಸಂಪರ್ಕಿಸುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ.

ಯಾವುದೇ ಅಸಹಜ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ, ಓಲಾ ತನ್ನ ಪರಿಣಾಮಕಾರಿತ್ವವನ್ನು ಮತ್ತಷ್ಟು ಹೆಚ್ಚಿಸಲು ಯೋಜನೆಯಲ್ಲಿ ನೈಜ ಸಮಯದ ದತ್ತಾಂಶವನ್ನು ಸಂಯೋಜಿಸಿದೆ. ಹೆಚ್ಚುವರಿಯಾಗಿ, ಮೇಲ್ವಿಚಾರಣಾ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮೇಲ್ವಿಚಾರಣಾ ವೇದಿಕೆಗೆ ಚಲಿಸಲು ಸಾಧ್ಯವಾಗದಿರುವ ಮತ್ತು ಅಸುರಕ್ಷಿತ ಮಾರ್ಗಗಳನ್ನು ಗುರುತು ಮಾಡಿ ಸಹಕರಿಸುವಂತೆ ಸರ್ಕಾರದ ಅಧಿಕಾರಿಗಳೊಂದಿಗೆ ಓಲಾ ಕಾರ್ಯನಿರ್ವಹಿಸುತ್ತಿದೆ.ಈ ಸಾಮಥ್ರ್ಯವು, ಪ್ರಯಾಣಕ್ಕೆ ಸಂಬಂಧಿಸಿದಂತೆ ದುರ್ಬಲತೆಗಳನ್ನು ಗುರುತಿಸಲು ಹಾಗೂ ಸುರಕ್ಷತಾ ಮಾನದಂಡಗಳನ್ನು ಅಳವಡಿಸುವ ನಿಟ್ಟಿನಲ್ಲಿ ಓಲಾದ ಖ್ಕS ಅನ್ನು ಮತ್ತಷ್ಟು ಸಕ್ರಿಯಗೊಳಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ