ನವದೆಹಲಿ: ಕೆಲವೊಂದು ನಿರ್ಬಂಧವನ್ನು ವಿಧಿಸುವ ಮೂಲಕ ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದೆ. ಅಲ್ಲದೇ ಖಾಸಗಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯಲ್ಲ, ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಆಧಾರ್ ಸಂಖ್ಯೆ ಕಡ್ಡಾಯ ಎಂದು ಹೇಳುವ ಮೂಲಕ ಬುಧವಾರ ಮಹತ್ವದ ತೀರ್ಪು ನೀಡಿದೆ.
ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ 27 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಸಾಂವಿಧಾನಿಕ ಪೀಠದ ನ್ಯಾಯಾಧೀಶರು ಅಂತಿಮ ತೀರ್ಪು ಪ್ರಕಟಿಸಿದೆ.
ಯಾವುದಕ್ಕೆ ಆಧಾರ್ ಕಡ್ಡಾಯ?
*ಪ್ಯಾನ್ ನಂಬರ್ ಗೆ ಆಧಾರ್ ಜೋಡಣೆ
*ಸರ್ಕಾರಿ ಸೌಲಭ್ಯಗಳು
*ಐಟಿ ರಿಟರ್ನ್ಸ್ ಸಲ್ಲಿಸಲು
ಯಾವುದಕ್ಕೆ ಆಧಾರ್ ಕಡ್ಡಾಯವಲ್ಲ?
*ಬ್ಯಾಂಕ್ ಖಾತೆಗಳಿಗೆ
*ಪೇಟಿಯಂ, ಫೋನ್ ಪೇ, ಡಿಜಿಟಲ್ ಅ್ಯಪ್ ಗಳಿಗೆ
* ಮೊಬೈಲ್ ನಂಬರ್
*ಹಣಕಾಸು ಉದ್ದೇಶ
*ಮೊಬೈಲ್ ಸಿಮ್ ಖರೀದಿ
*ಖಾಸಗಿ ಶಾಲಾ, ಕಾಲೇಜು ಸೇರ್ಪಡೆ
*6 ತಿಂಗಳಿಗಿಂತ ಹೆಚ್ಚು ಕಾಲ ಆಧಾರ್ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ