ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಎಂಪಿ ಹಾಗೂ ಎಂಎಲ್ಎಗಳನ್ನು ಅಪರಾಧ ಸಾಬೀತಾಗುವ ಮುನ್ನವೇ ಆಯಾ ಸ್ಥಾನದಿಂದ ಅನರ್ಹಗೊಳಿಸುವ ಕುರಿತಾಗಿ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿರುವ ಪಂಚ ಸದಸ್ಯ ಪೀಠ ಮಹತ್ವದ ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ. ಪ್ರಸ್ತುತ ಅಪರಾಧ ಸಾಬೀತಾದಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಕಾನೂನು ಇದೆ. ಸದ್ಯ ಎಲ್ಲಾ ವಾದ-ವಿದಾಗಳನ್ನು ಆಲಿಸಿರುವ ಪಂಚ ಸದಸ್ಯ ಪೀಠ ಇಂದು ತೀರ್ಪನ್ನು ನೀಡಲಿದೆ.