
ನವದೆಹಲಿ: 5,000ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ಮುಖ್ಯಸ್ಥ ನಿತಿನ್ ಸಂದೇಸರಾ ಯುಎಇ ನಲ್ಲಿಲ, ಅವರು ನೈಜೀರಿಯಾಗೆ ಪಲಾಯನ ಮಾಡಿರುವ ಸಾಧ್ಯತೆ ಇದೆ ಎಂದು ಮಾದ್ಯಮ ವರದಿಗಳು ಹೇಳಿದೆ.
ಆಗಸ್ಟ್ ಎರಡನೇ ವಾರದಲ್ಲಿ ಯುಎಇ ನಲ್ಲಿ ಸಂದೇಸರಾ ಅವರನ್ನು ಅಧಿಕಾರಿಗಳು ಬಂಧಿಸಿದ್ದಾಗಿ ವರದಿಯಾಗಿತ್ತು.ಆದರೆ ಆ ಮಾಹಿತಿ ತಪ್ಪಾಗಿದ್ದು ದುಬೈ ನಲ್ಲಿ ಅವರ ಬಂಧನವಾಗಿರಲಿಲ್ಲ.ಅವರು ಹಾಗೂ ಆವರ ಕುಟುಂಬ ಬಂಧನಕ್ಕೆ ಮುನ್ನವೇ ನೈಜೀರಿಯಾಗೆ ತೆರಳಿತ್ತು ಎಂದು ಆಂಗ್ಲ ಮಾದ್ಯಮವೊಂದು ವರದಿ ಮಾಡಿದೆ.
ಸಂದೇಸರಾ ಅವರ ಸೋದರ ಹಾಗೂ ಅತ್ತಿಗೆ ಸೇರಿ ಅವರ ಇತರೆ ಕುಟುಂಬಸ್ಥರು ನೈಜೀರಿಯಾಗೆ ಪಲಾಯನ ಮಾಡಿದ್ದಾರೆ ಎಂದು ನಂಬಲಾಗಿದೆ.
ಭಾರತ ಹಾಗೂ ನೈಜೀರಿಯಾ ನಡುವೆ ಯಾವುದೇ ಬಗೆಯ ಹಸ್ತಾಂತರ ಒಪ್ಪಂದವಾಗಲಿ, ದ್ವಿಪಕ್ಷೀಯ ಸಹಕಾರ ಒಪ್ಪಂದವಾಗಲಿ ಇಲ್ಲದ ಕಾರಣ ಅಲ್ಲಿಗೆ ಪರಾರಿಯಾಗಿರುವ ಸಂದೇಸರಾ ಮತ್ತು ಅವರ ಕುಟುಂಬಸ್ಥರನ್ನು ಭಾರತಕ್ಕೆ ಕರೆತರುವುದು ಕಾನೂನು ಪ್ರಕಾರ ಕಷ್ಟಸಾಧ್ಯ ಎನ್ನಲಾಗುತ್ತಿದೆ.
ವಂಚನೆ ಆರೋಪದಲ್ಡಿಯಲ್ಲಿ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಮುಖ್ಯಸ್ಥರ ವಿರುದ್ಧ ಸಿಬಿಐಅ ಎಫ್ ಐ ಆರ್ ದಾಖಲಿಸಿತ್ತು. ಆಂಧ್ರ ಬ್ಯಾಂಕ್ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟಕ್ಕೆ ನಿತಿನ್ ಸಂದೇಸರಾ ಐದು ಸಾವಿರ ಕೋಟಿ ಸಾಲ ಪಡೆದು ವಂಚಿಸಿದ್ದಾರೆ. ಇದೀಗ ಈ ಸ್ಲದ ಮೊತ್ತ ಮರುಪಾವತಿಯಾಗದ ಸಾಲ (ಎನ್ ಪಿಎ) ಆಗಿ ಪರಿವರ್ತನೆಯಾಗಿದೆ.೨೦೧೬ ಡಿಸೆಂಬರ್ ೩೧ರ ಪ್ರಕಾರ ಸಂಸ್ಥೆಯು ಬ್ಯಾಂಕ್ ಗೆ 5383 ಕೋಟಿ ರೂ. ಬಾಕಿ ನೀಡಬೇಕಿದೆ.