ವಸಂತವಲ್ಲಭರಾಯಸ್ವಾಮಿ ದೇವಾಲಯದ ಜೀರ್ಣೋದ್ಧಾರಗೊಂಡ ಕಲ್ಯಾಣಿ ಉದ್ಘಾಟಿನೆ

ಬೆಂಗಳೂರು, ಸೆ.24-ನಗರದ ಪ್ರಸಿದ್ಧ ವಸಂತವಲ್ಲಭರಾಯಸ್ವಾಮಿ ದೇವಾಲಯ ಸಮೀಪದ ಜೀರ್ಣೋದ್ಧಾರಗೊಂಡ ಕಲ್ಯಾಣಿಯನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

ಕಳೆದ ಹಲವಾರು ದಿನಗಳಿಂದ ನೂರಕ್ಕೂ ಹೆಚ್ಚು ಕಾರ್ಮಿಕರು ಶ್ರಮಿಸಿ ನಿರ್ಮಿಸಿರುವ ಹಾಗೂ ವಸಂತಪುರ ಗ್ರಾಮಸ್ಥರ ಕನಸಾಗಿದ್ದ ಕಲ್ಯಾಣಿ ಇಂದು ಪುನರ್ ಪುನಶ್ಚೇತನಗೊಂಡು ಮುಖ್ಯಮಂತ್ರಿಗಳಿಂದ ಚಾಲನೆ ಪಡೆದಿದೆ.
ಕಳೆದ ಮಾರ್ಚ್‍ನಿಂದ ಪುನರುಜ್ಜೀವನ ಕಾರ್ಯ ಆರಂಭಿಸಲಾಗಿದ್ದ ಈ ಪಾರಂಪರಿಕ ಕಲ್ಯಾಣಿ ನಿರ್ಮಾಣಕ್ಕೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಸಂಪನ್ನಗೊಂಡಿತ್ತು.

ಜಲಪೂರ್ಣದಂತಹ ಈ ಮಹತ್ವದ ಕಾರ್ಯವನ್ನು 8.5 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದ್ದು, 70 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮಥ್ರ್ಯ ಪಡೆದಿರುವ ಕಲ್ಯಾಣಿಯನ್ನು ತಿರುಪತಿಯಲ್ಲಿ ತೆಪೆÇ್ರೀ ನಡೆಯುವ ಕಲ್ಯಾಣಿ ಮಾದರಿಯಲ್ಲೇ ಅಭಿವೃದ್ಧಿ ಪಡಿಸಲಾಗಿದೆ.
ಕಲ್ಯಾಣಿಗೆ ಮುಕುಟಪ್ರಾಯದಂತೆ ಪುಟ್ಟ ಮಂಟಪವೊಂದನ್ನು ಮಧ್ಯದಲ್ಲಿ ನಿರ್ಮಿಸಿ 2 ಹಂತಗಳಲ್ಲಿ ಮೆಟ್ಟಿಲುಗಳನ್ನು ಕಟ್ಟಿ ಸುತ್ತಲೂ ಏಳು ಅಡಿ ಎತ್ತರದ ತಡೆಗೋಡೆ, ಜೊತೆಗೆ ಸಾರ್ವಜನಿಕರ ವೀಕ್ಷಣೆಗೂ ಅನುಕೂಲವಾಗುವಂತೆ ಬೇಲಿಯನ್ನು ಹಾಕಲಾಗಿದೆ.

ಮರಾಠರ ಆಳ್ವಿಕೆ ಕಾಲದಲ್ಲಿ ಶಿವಾಜಿಯವರ ತಂದೆ ಶಹಜೀ ಬೋಂಸ್ಲೆ ಈ ಸ್ಥಳದಲ್ಲಿ ಶಿಬಿರ ಹೂಡಿದ್ದಾಗ ಈ ಕಲ್ಯಾಣಿಯನ್ನು ಕಟ್ಟಿದ್ದರು ಎಂಬ ಇತಿಹಾಸವಿದೆ. ಅಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದ ಕಲ್ಯಾಣಿ ಇತ್ತೀಚಿನ ಅಂದರೆ 1980ರವೆರಗೂ ಜನಬಳಕೆಯಲ್ಲಿತ್ತು.
ಆದರೆ ನಂತರದ ದಿನಗಳಲ್ಲಿ ಇಲ್ಲಿನ ಜಲಮೂಲಕ್ಕೆ ಕಂಟಕ ಒದಗಿ ಅವಸಾನದ ಅಂಚಿಗೆ ತಲುಪಿದ್ದಲ್ಲದೆ, ಕಲ್ಯಾಣಿ ಸುತ್ತಲಿನ ಕಲ್ಲುಗಳು ಕಿತ್ತು ಬಂದು ಶಿಥಿಲಾವಸ್ಥೆ ತಲುಪಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನವಿ ಮೇರೆಗೆ ಕಲ್ಯಾಣಿಗೆ ಗತವೈಭವವನ್ನು ಮರಳಿಸಲು ಉದ್ದೇಶಿಸಿ ಆರಂಭವಾದ ಕಾಮಗಾರಿ ಇನ್ಫೋಸಿಸ್ ಸಹಯೋಗದಲ್ಲಿ ಸುಸೂತ್ರವಾಗಿ ನೆರವೇರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ