ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ದಿನಾಂಕ 5-6-7ನೆ ಅಕ್ಟೋಬರ್ ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಮೂರು ದಿನಗಳ ಮೇಳದಲ್ಲಿ ಸುಮಾರು 150ಕ್ಕೂ ಹೆಚ್ಚು ಹೋಟೆಲ್ , ರೆಸಾರ್ಟ್, ಹೋಂಸ್ಟೇ , ಟ್ರಾವೆಲ್ ಕಂಪನಿ , ವೀಸಾ ಕಂಪನಿ , ಆನ್ಲೈನ್ ಪೋರ್ಟಲ್ ಗಳು ಭಾಗವಾಸಿತ್ತಿವೆ.
ಕರ್ನಾಟಕ , ಕೇರಳ, ಗೋವಾ, ರಾಜಸ್ತಾನ , ಜಮ್ಮು ಕಶ್ಮೀರ , ಅಂಡಮಾನ್ ಸೇರಿದಂತೆ ಭಾರತದ ಎಲ್ಲ ಕಡೆಗಳಿಂದ ಭಾಗವಹಿಸುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾ , ನೇಪಾಳ , ಮಲೇಷ್ಯಾ, ಇಂಡೋನೇಷ್ಯಾ ದುಬೈ , ಈಜಿಪ್ಟ್ ದೇಶಗಳಿಂದಲೂ ಭಾಗವಸುತ್ತಿದ್ದಾರೆ.
ಈ ಮೂರು ದಿನಗಳ ಕಾರ್ಯಕ್ರಮವು ಪ್ರವಾಸೋದ್ಯಮಕ್ಕೆ ಸೇರಿದಂತೆ ಹಲವು ವಿಚಾರಾತ್ಮಕ ಕಾರ್ಯಗಾರಗಳನ್ನು ಏರ್ಪಡಿಸಿದ್ದು ಅದರಲ್ಲಿ ಗ್ರಾಮೀಣ ಪ್ರವಾಸೋದ್ಯಮ , ಅರೋಗ್ಯ ಪ್ರವಾಸೋದ್ಯಮ , ವೈನ್ ಟೂರಿಸಂ , ಅದ್ವೆಂಟುರ್ಸ್ ಟೂರಿಸಂ , ಮುಂತಾದ ವಿಷಯಗಳ ಬಗ್ಗೆ ನುರಿತ ಪರಿಣಿತರೊಂದಿಗೆ ಸಂವಾದ ನಡೆಸಿ ಚರ್ಚಿಸಲಾಗುತ್ತದೆ.
ವಿಶೇಷ ವಾಗಿ “ಒಂದು ಕಥೆ ಹೇಳುವೆ” ಕಾರ್ಯಕ್ರಮವು ಆಕರ್ಷಣೀಯ ವಾಗಿದ್ದು ಐತಿಹಾಸಿಕ ಸ್ಥಳಗಳು , ವಿಶೇಷವಾದ ಪ್ರದೇಶಗಳ ಬಗ್ಗೆ ಕಥೆ ಹೇಳುವುದು, ಮತ್ತು ಈ ಕಾರ್ಯಕ್ರಮವನ್ನು ಅನುಭವಿ ಗೈಡ್ ಗಳು ಮತ್ತು KLE ಶಿಕ್ಷಣ ಸಂಸ್ಥೆ ಶಿಕ್ಷಕರು ಹಾಗು ವಿದ್ಯಾರ್ಥಿಗಳು ನಡೆಸಿಕೊಡುತ್ತಿರುವುದು ವಿಶೇಷ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಂಸ್ಕೃತಿಕ ಉಡುಗೆ ಯಾದ ಮೈಸೂರ್ ಸಿಲ್ಕ್ ಸೀರೆ ಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಇಂಡಿಯನ್ ಟ್ರಡಿಷನಲ್ ಫ್ಯಾಷನ್ ಶೋ ಆಯೋಜಿಸಲಾಗಿದೆ.
ಒಟ್ಟಾರೆ ಕಾರ್ಯಕ್ರಮದಲ್ಲಿ , ದೇಸಿ ಊಟದ ವ್ಯವಸ್ಥೆ, ಪ್ಲಾಸ್ಟಿಕ್ ಫ್ರೀ , ದೇಸಿ ಉಡುಗೆ ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದೆ.
ಈ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಜನ ಭಾಗವಸುವ ನಿರೀಕ್ಷೆ ಇದ್ದು , ದಸರಾ ರಜಾ ದಿನಗಳು ಮತ್ತು ಕ್ರಿಸ್ತ್ಮಸ್ ರಜಾದಿನಗಳಿಗೆ ಪ್ರವಾಸ ಮಾಡುವವರಿಗೆ ಅನುಕೂಲ ವಾಗಲಿದೆ. ಯಾವ ಪ್ರದೇಶಗಳಿಗೆ , ಯಾವ ಸಮಯದಲ್ಲಿ ಹೋಗಬೇಕು , ಅಲ್ಲಿನ ವೈಶಿಷ್ಯತೆಗಳೇನು , ಎಷ್ಟು ದಿನ , ಪ್ರಯಾಣ ಹೇಗಿರಬೇಕು, ವಾಯುಮಾರ್ಗ , ಜಲಮಾರ್ಗ, ರಸ್ತೆ ಮಾರ್ಗಗಳಬಗ್ಗೆ ಮಾಹಿತಿ, ಹೋಟೆಲ್, ರೆಸಾರ್ಟ್, ಗಳಲ್ಲಿ ಸಿಗುವ ರಿಯಾಯಿತಿಗಳು ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶವಿರುತ್ತದೆ.
ಈ ವಿಶೇಷ ಮೇಳ ದಲ್ಲಿ ಪಾಲ್ಗೊಳ್ಳಲು ಇಚ್ಛಿಸುವರು ಕರೆ ನೀಡಿ 7022937357