ಬೆಂಗಳೂರು, ಸೆ.24-ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಹಾಗೂ ರಾಜ್ಯದಲ್ಲಿರುವ ಅಸ್ಪೃಶ್ಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.2 ರಂದು ಫ್ರೀಡಂಪಾರ್ಕ್ನಲ್ಲಿ ನಡೆಯಲಿರುವ ಧರಣಿಗೆ ಬಹಿಷ್ಕøತ ಹಿತಕಾರಿಣಿ ಸಭಾದ ಸಂಪೂರ್ಣ ಬೆಂಬಲ ಇದೆ ಎಂದು ಸಭಾದ ಅಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಸಮುದಾಯಗಳ ಜನಸಂಖ್ಯೆ ಆಧಾರದ ಮೇಲೆ ಹಂಚಿಕೆಯಾಗಬೇಕು. ಎ.ಜೆ.ಸದಾಶಿವ ವರದಿಯನ್ನು ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. ಈ ವೇಳೆ ರಾಜ್ಯದಲ್ಲಿನ ಅಸ್ಪೃಶ್ಯರಿಗೆ ಪ್ರತ್ಯೇಕವಾಗಿ ಮೀಸಲಾತಿ ಕಾಯ್ದೆ ಜಾರಿಯಾಗಬೇಕು, ಜಾತಿ, ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು, ಎಸ್ಸಿ-ಎಸ್ಟಿ ಬಸ್ತಿ ಮೀಸಲಾತಿಯನ್ನು 16(4ಎ) ಸಂರಕ್ಷಿಸಬೇಕು ಹಾಗೂ ಎಸ್ಸಿ-ಎಸ್ಟಿ ಅಟ್ರಾಸಿಟಿ ಕಾಯ್ದೆಯ ಮೂಲವನ್ನು ರಕ್ಷಿಸುಂತೆ ಧರಣಿಯಲ್ಲಿ ಒತ್ತಾಯಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅನಂತರಾಯಪ್ಪ, ಎಸ್.ವಿಜಯಮ್ಮ, ಎಂ.ಮುತ್ತುರಾಜು, ಎಂ.ಶ್ರೀನಿವಾಸ್, ವಿ.ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.