ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಸಮ್ಮತಿ !
September 24, 2018VDವಾಣಿಜ್ಯComments Off on ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಸಮ್ಮತಿ !
Seen By: 76
ಮುಂಬೈ : ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಆಡಳಿತ ಮಂಡಳಿ ಸಮ್ಮತಿಸಿದೆ.ದೇಶದಲ್ಲಿ ಎರಡನೇ ಹಂತದ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯಲ್ಲಿ ಬ್ಯಾಂಕ್ ಆಫ್ ಬರೋಡಾ,ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಗಳನ್ನು ವಿಲೀನಗೊಳಿಸುವುದಾಗಿ ಕೇಂದ್ರಸರ್ಕಾರ ಕಳೆದ ವಾರ ಹೇಳಿಕೆ ನೀಡಿತ್ತು.ಜಾಗತಿಕ ಹಾಗೂ ದೇಶಿಯವಾಗಿ ಪರಿಣಾಮಕಾರಿಯಾಗಿ ಪೈಪೋಟಿ ನಡೆಸಲು ಮತ್ತು ವಿಶ್ವದ ಬ್ಯಾಂಕ್ ಗಳಂತೆ ವ್ಯವಹಾರ ನಡೆಸುವ ನಿಟ್ಟಿನಲ್ಲಿ ಎರಡನೇ ಹಂತದ ಬ್ಯಾಂಕ್ ಗಳ ವಿಲೀನಗೊಳಿಸಲಾಗುತ್ತಿದ್ದು, ವಿಜಯ ಬ್ಯಾಂಕ್ ಹಾಗೂ ಬರೋಡಾ ಬ್ಯಾಂಕಿನೊಂದಿಗೆ ವಿಲೀನಗೊಳಿಸಲು ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ದೇನಾ ಬ್ಯಾಂಕ್ ಸ್ಪಷ್ಟಪಡಿಸಿದೆ.ವಿಜಯ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನದಿಂದ ಸದೃಢ ವಿಲೀನದ ಬ್ಯಾಂಕ್ ಕಾಣಬಹುದು ಹಾಗೂ ಹಣಕಾಸು ರಕ್ಷಣೆಯೊಂದಿಗೆ ಸ್ಥಿರತೆ ಹೊಂದಬಹುದಾಗಿದೆ. ಸಾಲ ಬೆಳವಣಿಗೆ ಹಾಗೂ ಹಣಕಾಸು ಒಳ ಹರಿಯುವಿಕೆ ಅಭಿವೃದ್ದಿಯಾಗಲಿದೆ ಎಂದು ದೇನಾ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.ಸ್ಟೇಟ್ ಬ್ಯಾಂಕ್ ಇಂಡಿಯಾ ನಂತರ ಎರಡನೇ ಹಂತದ ಬ್ಯಾಂಕ್ ಗಳ ವಿಲೀನಕ್ಕೆ ಮುಂದಾಗಿದ್ದು, ಜೂನ್ 2018ರಂದು ಈ ಮೂರು ಬ್ಯಾಂಕ್ ಗಳ ವ್ಯವಹಾರ 14. 82 ಟ್ರಿಲಿಯನ್ ನಷ್ಟಾಗಿತ್ತು.ಈ ಮಧ್ಯೆ ಮಾತನಾಡಿದ ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್, ಬ್ಯಾಂಕ್ ಗಳ ವಿಲೀನದಿಂದ ಆರ್ಥಿಕವಾಗಿ ಸದೃಢಗೊಳ್ಳಬಹುದು ಎಂದು ಹೇಳಿದ್ದಾರೆ.ಏಪ್ರಿಲ್ 2017ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ ಐದು ಸಹವರ್ತಿ ಬ್ಯಾಂಕುಗಳು ವಿಲೀನಗೊಂಡಿದ್ದವು. ಈಗ ಬ್ಯಾಂಕ್ ಆಫ್ ಬರೋಡಾ, ವಿಜಯ, ಹಾಗೂ ದೇನಾ ಬ್ಯಾಂಕ್ ಗಳ ವಿಲೀನದಿಂದಾಗಿ ಸಾರ್ವಜನಿಕ ಬ್ಯಾಂಕ್ ಗಳ ಒಕ್ಕೂಟದ ಸಂಖ್ಯೆ 19ಕ್ಕೆ ಇಳಿಕೆಯಾಗಿದೆ.