ದುಬೈ: ರೋಹಿತ್ ಶರ್ಮಾ, ಶಿಖರ್ ಧವನ್ ಅವರ ಶತಕದ ಜೊತೆಯಾಟ ಮತ್ತು ಬೌಲರ್‍ಗಳ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಟೀಂ ಇಂಡಿಯಾ ಬದ್ಧ ವೈರಿ ಪಾಕಿಸ್ತಾನ ತಂಡವನ್ನ 9 ವಿಕೆಟ್‍ಗಳ ಅಂತರದಿಂದ ಸೋಲಿಸಿ ಅತಿ ದೊಡ್ಡ ಗೆಲುವನ್ನ ಪಡೆದುಕೊಂಡಿದೆ.
ಭಾನುವಾರ ನಡೆದ ಹೈವೋಲ್ಟೇಜ್ ಕದನದಲ್ಲಿ 238 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಶತಕದ ಜೊತೆಯಾಟ ಆಡಿ ಅತ್ಯದ್ಭುತ ಬ್ಯಾಟಿಂಗ್ ಮಾಡಿದ್ರು. ಪಾಕ್ ಬೌಲರ್‍ಗಳನ್ನ ಮನಬಂದಂತೆ ದಂಡಿಸಿದ ಶಿಖರ್ ಧವನ್ ಏಕದಿನ ಕ್ರಿಕೆಟ್‍ನಲ್ಲಿ 15ನೇ ಶತಕ ಬಾರಿಸಿದ ಸಾಧನೆ ಮಾಡಿದ್ರೆ ಏಕದಿನ ಕ್ರಿಕೆಟ್‍ನಲ್ಲಿ 19ನೇ ಶತಕ ಪೂರೈಸಿದ ಸಾಧನೆ ಮಾಡಿದ್ರು.
ಧವನ್ 114, ರೋಹಿತ್ ಶರ್ಮಾ ಅಜೇಯ 111, ಅಂಬಾಟಿ ರಾಯ್ಡು 12 ರನ್ ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು ಇದರೊಂದಿಗೆ ಭಾರತ 39.3 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 238 ರನ್‍ಗಳಿಸಿ ಜಯಭೇರಿ ಬಾರಿಸಿತು.
ಇದಕ್ಕೂ ಮುನ್ನ ಟಾಸ್ ಗೆದ್ದುಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಆರಂಭದಲ್ಲೆ ಆಘಾತ ಅನುಭವಿಸಿತು. ನಾಯಕ ಸರ್ಫಾರಾಜ್ ಅಹ್ಮದ್ 44, ಶೋಯೆಬ್ ಮಲ್ಲಕ್ 78, ಅಸೀಫ್ ಅಲಿ 30 ರನ್ ಗಳಿಸಿದ್ರು.ಕೊನೆಯಲ್ಲಿ ಪಾಕ್ ತಂಡ ನಿಗದಿತ ಓವರ್‍ನಲ್ಲಿ 7 ವಿಕೆಟ್ ನಷ್ಟಕ್ಕೆ 237 ರನ್‍ಗಳಿಸಿತು. ಭಾರತ ಪರ ಜಸ್‍ಪ್ರೀತ್ ಬೂಮ್ರಾ, ಚಹಲ್ ಮತ್ತುಕುಲ್‍ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.