ಮುಂಬೈನಲ್ಲಿ 90 ರೂ ದಾಟಿದ ಪೆಟ್ರೋಲ್ ದರ

ಮುಂಬೈ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಮುಂದುವರೆದಿದ್ದು, ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ದರ 90.8 ತಲುಪಿದೆ.

ಮುಂಬೈನಲ್ಲಿ ಶುಕ್ರವಾರದಿಂದ ಪೆಟ್ರೋಲ್‌ ದರದಲ್ಲಿ ಪ್ರತಿ ಲೀಟರ್‌ಗೆ 11 ಪೈಸೆ ಹೆಚ್ಚಳ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಚೆನ್ನೈನಲ್ಲಿ 85.99, ಕೋಲ್ಕತಾದಲ್ಲಿ 84.54, ದೆಹಲಿಯಲ್ಲಿ 82.72 ಹಾಗೂ ಬೆಂಗಳೂರಿನಲ್ಲಿ 83.47 ಮುಟ್ಟಿದೆ.

ಶುಕ್ರವಾರ ಮುಂಬೈನಲ್ಲಿ ಪೆಟ್ರೋಲ್‌ ದರ 89.69 ಮತ್ತು ಡೀಸೆಲ್‌ಗೆ 78.42 ದರ ನಿಗದಿಯಾಗಿತ್ತು. ಕೆಳದ ಕೆಲವು ವಾರಗಳಿಂದ ತೈಲ ದರ ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದು, ‌‘ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಹೆಚ್ಚಳ, ರೂಪಾಯಿ ಮೌಲ್ಯ ಕುಸಿತವೇ ಕಾರಣ ಎಂದು ಕೇಂದ್ರ ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ