ಸಿಕ್ಕಿಂ: ಸಿಕ್ಕಿಂ ನ ಗಂಗ್ಟೋಕ್ ನಲ್ಲಿ ಪಕ್ಯೊಂಗ್ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
605.59 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಇದಾಗಿದ್ದು, ಸಿಕ್ಕಿಂನಿಂದ 30 ಕಿಮೀ ದೂರದಲ್ಲಿ ಈ ವಿಮಾನ ನಿಲ್ದಾಣವಿದೆ, ಅಕ್ಟೋಬರ್ 4 ರಿಂದ ಕಮರ್ಷಿಯಲ್ ವಿಮಾನಗಳು ಇಲ್ಲಿ ಹಾರಾಟ ನಡೆಸುತ್ತವೆ. ಸ್ಪೈಸ್ ಜೆಟ್ ವಿಮಾನ ನಿಲ್ದಾಣಗಳು ಕೊಲ್ಕೊತಾ ಸಿಕ್ಕಿಂ ವಿಮಾನ ಸಂಚಾರ ಆರಂಭವಾಗಲಿದೆ.
ಸಿಕ್ಕಿಂನ ಎತ್ತರದ ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ಗ್ರೀನ್ಫೀಲ್ಡ್ ಏರ್ಪೋರ್ಟ್, ಗ್ಯಾಂಗ್ಟಾಕ್ ಇತ್ತೀಚೆಗೆ ಸಿವಿಲ್ ಏವಿಯೇಷನ್ ಇಲಾಖೆಯ ವಾಣಿಜ್ಯ ಹಾರಾಟದ ಆಯೋಗದಿಂದ ಅನುಮತಿ ಪಡೆದುಕೊಂಡಿದೆ. ಈ ವಿಮಾನ ನಿಲ್ದಾಣವು ದೇಶದಲ್ಲಿ 100 ನೇ ವರ್ಕಿಂಗ್ ವಿಮಾನ ನಿಲ್ದಾಣವಾಗಿದೆ.