ಸಮ್ಮಿಶ್ರ ಸರ್ಕಾರ ಅಸ್ಥಿರವಾಗಲ್ಲ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭವಿಷ್ಯ

ಹಾಸನ: ಈ ಸರ್ಕಾರ ಯಾವದೇ ಕಾರಣಕ್ಕೂ ಅಸ್ಥಿರ ಆಗಲ್ಲ ನಾನು ಭವಿಷ್ಯ ನುಡಿಯುತ್ತಿದ್ದೆನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾದಿದ ಅವರು, ಸರ್ಕಾರ ಅಸ್ಥಿರವಾಗಲು ಸಾಧ್ಯವೇ ಇಲ್ಲ ಎಂದರು.

ಸಿದ್ದರಾಮಯ್ಯ ನಾನು ಒಂದು ಕಾಲದಲ್ಲಿ ಉತ್ತಮ ಸ್ನೇಹಿತರು, ಕೆಲಕಾರಣದಿಂದ ದೂರಾಗಬೇಕಾಯಿತು. ಆದರೆ ಇಂದು ಸಿದ್ದರಾಮಯ್ಯ ನವರು ನಮ್ಮ ಜೊತೆ ಕೈಜೋಡಿಸಿದ್ದಾರೆ ಈ ಸರ್ಕಾರದ ಜವಾಬ್ದಾರಿ ಅವರ ಹೆಗಲಮೇಲಿದೆ. ಅದಕ್ಕೆ ಸಿದ್ದರಾಮಯ್ಯ ಅವರು ಇಂದು ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕಾಂಗ ನಾಯಕರಾಗಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ದಯವಿಟ್ಟು ಮಾಧ್ಯಮದವರು ಇನ್ನು ಮುಂದೆ ಅಸ್ಥಿರ ಸರ್ಕಾರವೆಂದು ಜನರಿಗೆ ಹೇಳಬೇಡಿ ಕೈ ಮುಗಿದು ಕೇಳಿಕೊಳ್ಳುತ್ತೆನೆ ಎಂದರು.

ಸಾಮಾನ್ಯವಾಗಿ ಸಣ್ಣ ಪುಟ್ಟ ಲೋಪಧೋಷ ಇರೋದು ನಿಜ ಅದನ್ನ ಸರಿಪಡಿದಿಕೊಳ್ಳುತ್ತೀವಿ ಮತ್ತು ಅದನ್ನ ಸ್ವಾಭಾವಿಕವಾಗಿ ಸರಿಪಡಿಸೋ ಶಕ್ತಿ 135 ಇತಿಹಾಸ ವುಳ್ಳ ಕಾಂಗ್ರೆಸ್ ಪಕ್ಷಕ್ಕೂ ಇದೆ. 104 ಸ್ಥಾನ ಪಡೆದ ಬಿಎಸ್ ವೈ ಅವರಿಗೆ ಕೋಪ ಇರುವುದು ಸಹಜ ಆದರೆ ಅವರು ವಿಶ್ವಾಸ ಮತ ಯಾಚನೆಯಲ್ಲಿ ವಿಫಲವಾದ ಮೇಲೆ ಕುಮಾರಸ್ವಾಮಿ ಬಹುಮತ ಸಾಭೀತು ಪಡಿಸಿ ಮುಖ್ಯಮಂತ್ರಿ ಆಗಿದ್ದಾರೆ ದಯವಿಟ್ಟು ಇದನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ನಾನು ಪ್ರಧಾನಿ ಆಗಿದ್ದಾಗ ವಿರೋಧ ಪಕ್ಷದಲ್ಲಿದ್ದ ವಾಜಪೇಯಿ ಅವರಾಗಲಿ ಅಥವಾ ಬಿಜೆಪಿ ಪಕ್ಷವಾಗಲಿ ಒಂದು ದಿನವೂ ಸದನದ ಘನತೆಗೆ ಅಡ್ಡಿ ಪಡ್ಡಿಸಿಲ್ಲ ಅಂತಹ ನಾಯಕರ ಪಕ್ಷದಲ್ಲಿ ಬೆಳೆದ ರಾಜ್ಯದ ಹಿರಿಯ ನಾಯಕರಾದ ಯಡಿಯೂರಪ್ಪ ನವರು ಯೋಚಿಸಿ ನಡೆದುಕೊಳ್ಳಬೇಕು ಎಂದರು

ರಾಜ್ಯದ ಇತಿಹಾಸದಲ್ಲಿ ರೈತರ ದೊಡ್ಡ ಮಟ್ಟದ ಸಾಲ ಮನ್ನವಾಗಿದೆ. ಬಡವರಿಗೆ ತೊಂದರೆ ಆಗಬಾರದು ಎಂದು ಖಾಸಗಿ ಸಾಲವನ್ನು ಸಹ ಮನ್ನ ಮಾಡಲಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಯನ್ನು ಸಹ ಕಡಿಮೆ ಮಾಡಿದ್ದಾರೆ ಎಂದು ಹೇಳಿದರು.

ಈ ದಿನ ಹೇಳುತ್ತಿದ್ದೀನಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಜಿಲ್ಲೆಯಲ್ಲಿ ನಾನು ಅಭಿಪ್ರಾಯ ಪಟ್ಟ ಎಲ್ಲಾ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಆ ಕೆಲಸಗಳನ್ನ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಡೋ ಭಾಗ್ಯ ದೊರಕಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ