ಬೆಂಗಳೂರು, ಸೆ.22- ಪೆÇೀಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕೆಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಇಂದಿಲ್ಲಿ ಸಲಹೆ ಮಾಡಿದರು.
ನಗರದಲ್ಲಿಂದು ನಡೆದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು. ಒಳ್ಳೆಯ ಸಂಸ್ಕøತಿ, ಸಂಸ್ಕಾರವನ್ನು ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೆÇೀಷಕರ ಮೇಲಿದೆ ಎಂದರು.
ಸಂಘದ ಸದಸ್ಯರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಒಳ್ಳೆಯ ಸಂಪ್ರದಾಯ. ಈ ಸಹಕಾರ ಸಂಘ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಿ ನಡೆಯಬೇಕೆಂದು ಆಶಿಸಿದರು.
ಬಿಎಂಟಿಸಿಯ ನಿವೃತ್ತ ಮುಖ್ಯ ಸಂಚಾರ ವ್ಯವಸ್ಥಾಪಕ ದಸ್ತಗಿರ್ ಶರೀಫ್ ಮಾತನಾಡಿ, ಪತ್ತಿನ ಸಹಕಾರ ಸಂಘವನ್ನು ಮುನ್ನೆಡಸುವುದು ಸುಲಭವಲ್ಲ. ಸಾಕಷ್ಟು ಅಡೆ-ತಡೆಗಳು ಎದುರಾಗುತ್ತವೆ. ಆದರೂ ಬಿಎಂಟಿಸಿ ನೌಕರರ ಸಂಘ ಎಲ್ಲ ಅಡೆತಡೆಗಳನ್ನು ಎದುರುಸಿ 19 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಇನ್ನಷ್ಟು ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ವಿಜಯ್ಕುಮಾರ್ ರೈ, ಕೆಎಸ್ಆರ್ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ ಫೆಡ್ರೆಷನ್ ಪ್ರಧಾನಕಾರ್ಯದರ್ಶಿ ಎಚ್.ವಿ.ಅನಂತಸುಬ್ಬರಾವ್, ಕೆಎಸ್ಆರ್ಟಿಸಿ ಮಹಾಮಂಡಳದ ಅಧ್ಯಕ್ಷ ಕೆ.ಎಸ್.ಶರ್ಮಾ, ಕೆಎಸ್ಆರ್ಟಿಸಿಯ ವಿಭಾಗಿಯ ಸಂಚಾರ ಅಧಿಕಾರಿ ಪುರುಷೋತ್ತಮ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೃಷ್ಣಮೂರ್ತಿ, ಬಿಎಂಟಿಸಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಸೇರಿದಂತೆ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.