ಭಯೋತ್ಪಾದಕರಿಂದ ಪೊಲೀಸರ ಅಪಹರಣ ನಂತರ ಮೂವರು ಪೊಲೀಸರ ಹತ್ಯೆ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಸೋಪಿಯಾನ್ ಜಿಲ್ಲೆಯಲ್ಲಿ ಪೊಲೀಸರ ಮನೆಗಳಿಗೆ ನುಗ್ಗಿದ ಭಯೋತ್ಪಾದಕರು, ಪೊಲೀಸರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಅವರಲ್ಲಿ ಮೂವರನ್ನು ಗುಂಡಿಕ್ಕಿ ಸಾಯಿಸಿದರು. ಅಪಹರಣವಾದ ಕೆಲವು ಗಂಟೆಗಳ ನಂತರ ಅವರ ಮೃತದೇಹಗಳು ಪತ್ತೆಯಾಗಿವೆ ಮತ್ತು ದೇಹದ ಮೇಲೆಲ್ಲಾ ಗುಂಡಿನ ಗಾಯಗಳಾಗಿವೆ. ನಾಲ್ಕನೇ ಪೊಲೀಸ್ ಪೇದೆ ಗ್ರಾಮಸ್ಥರ ಸಹಾಯದಿಂದ ಬಿಡುಗಡೆಯಾದರು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದರು.

ಹಿಜ್‌ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯು ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ಪೊಲೀಸರವರು ಆನ್‌ಲೈನ್ ಮೂಲಕ ರಾಜೀನಾಮೆ ನೀಡದಿದ್ದರೆ ಅವರನ್ನು ಕೊಲ್ಲಲಾಗುವುದು ಎಂದು ಹೇಳಿದ ಮರುದಿನವೆ ಈ ಘಟನೆ ನಡೆದಿದೆ. ಈ ಘಟನೆ ನಡೆದಿದ್ದು ದಕ್ಷಿಣಾ ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಕಪ್ರಾನ್ ಗ್ರಾಮದಲ್ಲಿ, ಅವರ ಮನೆಗಳಿಗೆ ನುಗ್ಗಿದ ಭಯೋತ್ಪಾದಕರು ಪೊಲೀಸರನ್ನು ಮನೆಯಿಂದ ಎಳೆದುಕೊಂಡು ಹೋದರು, ಅವರೆಲ್ಲಾ ವಿಶೇಷ ಪೊಲೀಸ್ ಅಧಿಕಾರಿಗಳಾಗಿದ್ದರು.

ಅಧಿಕಾರಿಗಳನ್ನು ರಕ್ಷಿಸಲು ಗ್ರಾಮಸ್ಥರು ಭಯೋತ್ಪಾದಕರನ್ನು ಅಟ್ಟಿಸಿಕೊಂಡು ಹೋದರು, ಆದರೆ ಭಯೋತ್ಪಾದಕರು ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು. ನಂತರ ನದಿಯನ್ನು ದಾಟಿ ಪೊಲೀಸರವರನ್ನು ಗುಂಡಿಕ್ಕಿ ಕೊಂದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಪೊಳಿಸರನ್ನು ಕೊಂದ ಘಟನೆ ನಡೆದ ತಕ್ಷಣ, ೬ ಜನ ಪೊಲೀಸರು ತಾವು ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು, ಅವರಲ್ಲಿ ನಾಲ್ವರು ಪೊಲೀಸರು ವಿಡಿಯೋ ಕಳುಹಿಸಿ ರಾಜೀನಾಮೆಯನ್ನು ದೃಡಪಡಿಸಿದರು.

ಫಿರ‍್ದೋಸ್ ಆಹಮದ್ ಕುಚಾಯಿ, ನಿಸಾರ್ ಆಹಮದ್ ಮತ್ತು ಕುಲ್ದೀಪ್ ಸಿಂಗ್ ಮೃತಪಟ್ಟ ಪೊಲೀಸ್ ಅಧಿಕಾರಿಗಳು ಎಂದು ಪೊಲೀಸ್ ಮೂಲಗಳು ಹೇಳಿವೆ.

ಕಳೆದ ತಿಂಗಳು ೯ ಜನ ಪೊಲೀಸ್ ಮತ್ತು ಸೇನೆಯ ಕುಟುಂಬಸ್ಥರನ್ನು ಭಯೋತ್ಪಾದಕರು ಅಪಹರಿಸಿ ನಂತರ ಬಿಡುಗಡೆ ಮಾಡಿದ್ದರು. ನಂತರ ಹಿಜಬುಲ್ ಸಂಘಟನೆಯ ಕಮಾಂಡರ್ ೧೨ ನಿಮಿಷದ ಒಂದು ವಿಡಿಯೋವನ್ನು ಬಿಡುಗಡೆ ಮಾಡಿ, ಉದ್ದೇಶಪೂರ್ವಕವಾಗಿಯೆ ಅವರನ್ನು ಅಪಹರಿಲಾಗಿದೆ ಎಂದು ಹೇಳಿತ್ತು. ಮತ್ತು ಬಂಧಿಸಿರುವ ಭಯೋತ್ಪಾದಕರು ಮತ್ತು ಅವರ ಸಂಬಂಧಿಗಳನ್ನು ಮೂರು ದಿನಗಳ ಒಳಗಾಗಿ ಬಿಡುಗಡೆ ಮಾಡುವಂತೆ ಗಡವು ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸರು ರಾಜಿನಾಮೆ ನೀಡಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ