ಬೆಂಗಳೂರು, ಸೆ.22- ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ನಾಳೆಯಿಂದ 2019ರ ಮಾರ್ಚ್ 8ರವರೆಗೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹುಮೇನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆ ಜಾಸ್ಮಿನ್ ಫಾರೂಕಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ತಾರತಮ್ಯ, ಕಿರುಕುಳ ಹೆಚ್ಚುತ್ತಿದೆ. ಆದ್ದರಿಂದ ಈ ಅಭಿಯಾನವನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮಹಿಳೆಯರಿಗೆ ಉತ್ತಮ ಆರೋಗ್ಯ ಸೇವೆ, ಶಿಕ್ಷಣ, ಸಮಾನ ವೇತನ, ಸಮಾನ ಅವಕಾಶ ನೀಡುವುದಕ್ಕೆ ಸರ್ಕಾರ ಮುಂದಾಗಬೇಕು. ಮುಸ್ಲಿಂ, ದಲಿತ, ಆದಿವಾಸಿ ಮಹಿಳೆಯರು ಹೆಚ್ಚು ನಿಂದನೆ ಮತ್ತು ತಾರತಮ್ಯ ನೀತಿಗೆ ಒಳಗಾಗುತ್ತಿದ್ದಾರೆ ಎಂಬುದು ಸರ್ಕಾರಿ ಅಂಕಿ-ಅಂಶಗಳಿಂದಲೇ ಬಹಿರಂಗಪಡಿಸಿದೆ. ಆದರೆ, ಸರ್ಕಾರ ಮಹಿಳೆಯರ ಅಭಿವೃದ್ಧಿ ವಿಷಯದಲ್ಲಿ ಕೇವಲ ಘೋಷಣೆ ಮತ್ತು ಭರವಸೆಗಳನ್ನು ನೀಡುತ್ತಿದೆ. ಸಮಾಜದ ಅರ್ಧ ಭಾಗವಾಗಿರುವ ಮಹಿಳೆಯರ ಹಕ್ಕು, ಅಭಿವೃದ್ಧಿ, ಘನತೆ ಮತ್ತು ಸ್ವಾಭಿಮಾನ ರಕ್ಷಣೆಗಾಗಿ ಮಹಿಳೆಯರು ಸಂಘಟಿತರಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.
ನಾಳೆ ಸಂಜೆ 4.30ಕ್ಕೆ ನಗರದ ಜಯಮಹಲ್- ನಂದಿದುರ್ಗ ರಸ್ತೆಯಲ್ಲಿರುವ ಪಾಲನಭವನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಜಾಸ್ಮಿನ್ಫಾರೂಕಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡೈಸಿಬಾಲಸುಬ್ರಹ್ಮಣ್ಯ, ಸುಫಿಯ ಫರ್ವಿನ್, ನಾಗರತ್ನ, ಆಯುಷ ಬಜ್ಪೆ ಉಪಸ್ಥಿತರಿದ್ದರು.