
ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಜಿಲ್ಲೆಯ ಶೃಂಗೇರಿ ದೇವಾಲಯಕ್ಕೆ ಆಗಮಿಸಿದ್ದಾರೆ.
ಶೃಂಗೇರಿ ಶಾರದಾಂಬೆಗೆ ಹೆಚ್ಡಿಡಿ ಚಾತುರ್ಮಾಸದ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಈ ಚಾತುರ್ಮಾಸ ಪೂಜೆಯಲ್ಲಿ ಹೆಚ್ಡಿಡಿ ಪತ್ನಿ ಚೆನ್ನಮ್ಮ, ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ.
ಪೂಜೆ ಬಳಿಕ ಗಣಪತಿ ಹೋಮದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಶೃಂಗೇರಿ ದೇವಾಲಯದ ಚಂದ್ರಶೇಖರ ಸಭಾಂಗಣದಲ್ಲಿ ಸಿದ್ಧತೆ ನಡೆಸಲಾಗಿದೆ. ಇನ್ನು ಹೆಚ್ಡಿ ರೇವಣ್ಣ ಕೂಡ ಶೃಂಗೇರಿಗೆ ಆಗಮಿಸಿದ್ದಾರೆ.