
ಬೆಂಗಳೂರು: ರಾಜಭವನದಲ್ಲಿರೋ ಒಂದು ಸ್ಥಳ ಬಿಜೆಪಿಯ ಅದೃಷ್ಟದ ಸ್ಥಳವಾಗಿದೆಯಂತೆ. 2006ರಲ್ಲಿ ಹೆಚ್‍ಡಿಕೆ, ಬಿಎಸ್‍ವೈ ದೋಸ್ತಿಗೆ ಇದೇ ಸ್ಥಳದಿಂದಾಗಿ ಗ್ರೀನ್ ಸಿಗ್ನಲ್ ಸಿಕ್ಕಿತ್ತಂತೆ. ಹೀಗೆ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಅದೃಷ್ಟ ಖುಲಾಯಿಸಿದ್ದ ಸ್ಥಳವೇ ಇದೀಗ ಬಿಜೆಪಿಯ ಲಕ್ಕಿ ಸ್ಥಳವಾಗಿದೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ರಾಜಭವನದ ಬ್ಯಾಂಕ್ವೆಟ್ ಹಾಲ್ ಬಿಜೆಪಿ ಪಾಲಿನ ಲಕ್ಕಿ ಸ್ಥಳ ಅಂತೆ. 2006ರಲ್ಲಿ ಇದೇ ಜಾಗದಲ್ಲಿ ರಾಜ್ಯಪಾಲರು ಜೆಡಿಎಸ್, ಬಿಜೆಪಿ ಶಾಸಕರ ತಲೆ ಎಣಿಕೆ ನಡೆಸಿದ್ದರು. ಅಂದು ಹೆಚ್‍ಡಿಕೆ ಜತೆ ಬಂದಿದ್ದ ಜೆಡಿಎಸ್ ಶಾಸಕರು ಕೂಡ ರಾಜಭವನಕ್ಕೆ ಹೋಗಿದ್ದರು. ಆಗ ರಾಜ್ಯಪಾಲರು ಎರಡು ಕಡೆ ತಲೆ ಎಣಿಕೆ ಮಾಡಿ ಸರ್ಕಾರ ರಚನೆಗೆ ಅನುಮತಿ ನೀಡಿದ್ದರು.
ನಿನ್ನೆ (ಶುಕ್ರವಾರ) ರಾಜಭವನದಲ್ಲಿ ದಂಗೆ ವಿರುದ್ಧ ಕೂಡ ಬ್ಯಾಂಕ್ವೆಟ್ ಹಾಲ್‍ನಲ್ಲಿ ದೂರು ಕೊಟ್ಟಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ನಾಯಕರು 2006ರ ತಲೆ ಎಣಿಕೆ ಹಿಸ್ಟರಿ ಮೆಲಕು ಹಾಕಿದ್ದಾರೆ.
ರಾಜಭವನದ ಭೇಟಿ ಬಳಿಕ ಬಿಎಸ್‍ವೈ ನಿವಾಸಕ್ಕೆ ಬಂದ ಕೆಲವು ನಾಯಕರು, ಅದೃಷ್ಟದ ಸ್ಥಳದಿಂದಲೇ ನಾವು ದೂರು ಕೊಟ್ಟಿದ್ದೇವೆ. ಹೀಗಾಗಿ ಅಲ್ಲಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಶುರುವಾಗುತ್ತದೆ ಅಂತ ಬಿಎಸ್‍ವೈಗೆ ಅದೃಷ್ಟ ಸ್ಥಳವಾಗಿರುವ ಬಗ್ಗೆ ಹೇಳಿಕೊಂಡು ಖುಷಿಪಟ್ಟಿದ್ದಾರೆ.
ಒಟ್ಟಿನಲ್ಲಿ ಬ್ಯಾಂಕ್ವೆಟ್ ಹಾಲ್‍ನಿಂದಲೇ ಸಮ್ಮಿಶ್ರ ಸರ್ಕಾರದ ವಿರುದ್ಧ ದೂರಿನ ಸಮರ ಆರಂಭವಾಗಿದೆ. ಹಾಗಾದ್ರೆ ರಾಜಭವನದ ಆ ಸ್ಥಳಕ್ಕೂ, ಸರ್ಕಾರ ರಚನೆಯ ಅದೃಷ್ಟಕ್ಕೂ ಸಂಬಂಧವಿದೆಯಾ, ಬಿಜೆಪಿಯ ನಾಯಕರ ಅದೃಷ್ಟದ ಆಸೆ ನಿಜಕ್ಕೂ ಕೂಡ ಈಡೇರುತ್ತಾ ಎಬುದನ್ನು ಕಾದುನೋಡಬೇಕಾಗಿದೆ.