ಬೆಂಗಳೂರು,ಸೆ.22- ಶೃಂಗೇರಿ ಶಾರದಾಂಬೆ ದರ್ಶನಕ್ಕೆ ತೆರಳಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇನ್ನಾದರೂ ಸದ್ಭುದ್ದಿ ಬರಲಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಶಾರದಾಂಬೆಯ ದರ್ಶನದಿಂದ ಕುಮಾರಸ್ವಾಮಿ ಅವರ ದಂಗೆ ಎಂಬ ವಿಚಾರಗಳನ್ನು ಬಿಟ್ಟು ಇನ್ನು ಮುಂದಾದರೂ ಅಭಿವೃದ್ದಿ ಕಡೆ ಗಮನಹರಿಸಲಿ ಎಂದು ಟ್ವಿಟರ್‍ನಲ್ಲಿ ಕಾಲೆಳೆದಿದೆ.
ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸುವ ಸದ್ಬುದ್ಧಿಯನ್ನು ಶೃಂಗೇರಿ ಶಾರದಾಂಬೆ ಕರುಣಿಸಲಿ. ನಿರಂತರವಾಗಿ ನಡೆಯುತ್ತಿರುವ ದೇಗುಲ ಪ್ರವಾಸದಂತೆ ರಾಜ್ಯ ಪ್ರವಾಸವನ್ನು ಮಾಡುವ ಮನಸ್ಸನ್ನು ನೀಡಲಿ. ಶುಭ ಪ್ರಯಾಣ ಎಚ್.ಡಿ.ಕುಮಾರಸ್ವಾಮಿಯವರೇ ಎಂದು ಟ್ವೀಟ್ ಮಾಡಿದೆ.