ನವದೆಹಲಿ: ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೋಲಾಂಡ್ ಫ್ರಾನ್ಸ್-ಭಾರತದ ನಡುವೆ ನಡೆದಿರುವ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳು ಗಂಭೀರವಾಗಿದೆ. ಅದು ಕರಾರುವಾಕ್ಕಾಗಿ ವರದಿ ಆಗಿದ್ದೇ ಆದಲ್ಲಿ ಗಂಭೀರ ಹೇಳಿಕೆಗಳಾಗಿವೆ ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮೀಡಿಯಾಪಾರ್ಟ್ ಗೆ ನೀಡಿದ ಸಂದರ್ಶನದಲ್ಲಿ ಪಾಲುದಾರನಾಗಿ ರಿಲಯನ್ಸ್ ಅನ್ನು ಆಯ್ಕೆ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರಿಸಿರುವ ಫ್ರಾನ್ಸ್ ಮಾಜಿ ಅಧ್ಯಕ್ಷ್ಯರು, ರಿಲಾಯನ್ಸ್ ಹೆಸರನ್ನು ಪ್ರಸ್ತಾಪಿಸಿದ್ದು ಭಾರತನೇ ಮತ್ತು ಅದನ್ನು ಒಪ್ಪಿಕೊಳ್ಳದೇ ಡಸಾಲ್ಟ್ ಗೆ ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ಆ ಕಂಪನಿಯನ್ನು ಪಾಲುದಾರಿಕೆಯನ್ನು ಒಪ್ಪಿಕೊಳ್ಳಬೇಕಾಯಿತು ಎಂದಿದ್ದರು. ಫ್ರಾನ್ಸ್ ಅಧ್ಯಕ್ಷರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಸ್ವಾಮಿ, ಇದನ್ನು ನಿಖರವಾಗಿ ವರದಿ ಮಾಡಿರುವುದೇ ಆದರೆ ಗಂಭೀರ ಸ್ವರೂಪದ ಪರಿಣಾಮಗಳು ಎದುರಾಗಲಿವೆ ಎಂದು ತಿಳಿಸಿದ್ದಾರೆ.