ರಫೆಲ್ ಹಗರಣ: ಮೋದಿ ವಿರುದ್ಧ ಮೊಯ್ಲಿ ಆಕ್ರೋಶ

ಚಿಕ್ಕಬಳ್ಳಾಪುರ: ರಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಹಣವನ್ನು ಬಿಜೆಪಿ ಚುನಾವಣೆಗೆ ಬಳಸುತ್ತಿದೆ. ಡಜನ್‌ಗಟ್ಟಲೆ ಹಗರಣಗಳನ್ನ‌ ಕೇಂದ್ರ ಮೋದಿ ಸರ್ಕಾರ ನಡೆಸಿದ್ದು, ದರೋಡೆಕೋರ ಮೋದಿಗೆ ನಾಚಿಕೆ ಗೌರವವೇ ಇಲ್ಲ. ಹಾಗೇ ದರೋಡೆ ಮಾಡಿದ ಹಣದಲ್ಲಿ‌ ಮೋದಿ ಏನು ಬೇಕಾದರೂ ಮಾಡುತ್ತಾರೆ ಎಂದು ಸಂಸದ ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ರಫೆಲ್​ ಯುದ್ಧ ವಿಮಾನ ಖರೀದಿ ಹಗರಣ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ
ಭಾಗವಹಿಸಿ ಮಾತನಾಡಿದ ಮೊಯ್ಲಿ, ರಫೆಲ್ ಯುದ್ಧ ವಿಮಾನ ಖರೀದಿ ಹಗರಣ ದೇಶದಲ್ಲೇ ಅತಿ ದೊಡ್ಡ ಹಗರಣವಾಗಿದ್ದು, ಸುಮಾರು 48,000 ಕೋಟಿ ರೂ. ಒಳಗೊಂಡಿದೆ. ಯುದ್ಧ ವಿಮಾನ ಖರೀದಿ ಹಗರಣದ ಹಣವನ್ನು ಬಿಜೆಪಿ ಚುನಾವಣೆಗೆ ಬಳಸುತ್ತಿದೆ ಎಂದು ಆರೊಪಿಸಿದರು.

ರಾಜ್ಯದ ಶಾಸಕರನ್ನು ಖರೀದಿ ಮಾಡಲು ಪ್ರಧಾನಿ ನರೇಂದ್ರ ಮೋದಿ 50 ಕೋಟಿ ರೂ. ಹಣದ ಆಮಿಷ ಒಡ್ಡುತ್ತಿದ್ದಾರೆ. ಚುನಾವಣೆಗೂ 50 ಕೋಟಿ ರೂ. ನೀಡುತ್ತೇನೆ ಎನ್ನುತ್ತಿದ್ದಾರೆ. ಇವೆಲ್ಲಾ ರಫೆಲ್​ ವಿಮಾನ ಖರೀದಿಯ ಹಣವಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ