
ಮೈಸೂರು: ವಿಶ್ವವಿಖ್ಯಾತ ದಸರಾ ನವರಾತ್ರಿ ಮಹೋತ್ಸವ ದಿನಗಣನೆ ಆರಂಭವಾಗುತ್ತಿದ್ದಂತೆ ಅಪ್ಪನ ಖಾಸಗಿ ದರ್ಬಾರ್ ನೋಡಲು ಮಗನು ಕೂಡ ಹವಣಿಸುತ್ತಿದ್ದಾನೆ.
ಹೌದು, ಮಹಾರಾಜನಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೂರನೇ ಬಾರಿ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲು ರೆಡಿಯಾಗುತ್ತಿದ್ದರೆ ಇತ್ತ ಅರಮನೆ ವೈಭವದ ಸೊಬಗು ಹಾಗೂ ಅಪ್ಪನ ಖಾಸಗಿ ದರ್ಬಾರನ್ನು ಸವಿಯಲು ಪುತ್ರ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರೆಡಿಯಾಗುತ್ತಿದ್ದಾನೆ.
ಹೌದು, ಅತ್ತ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಸರಾ ಪ್ರಯುಕ್ತ ಸಿಂಹಾಸನವೇರಲು ಬೇಕಾಗಿರುವ ಎಲ್ಲ ಸಿದ್ದತೆಗಳನ್ನ ಅದ್ಧೂರಿಯಿಂದಲೇ ಮಾಡುತ್ತಿದ್ದರೆ, ಇತ್ತ ರಾಜಕುಮಾರ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ತಂದೆಯ ದರ್ಬಾರ್ ನೋಡುವ ಸಿದ್ದತೆಯಲ್ಲಿದ್ದಾರೆ. ಹಾಗಾಗಿ ರಾಜಕುಮಾರನಿಗೆ ಅರಮನೆ ಆಚರಣೆಯ ವಿಧಿ ವಿಧಾನಗಳನ್ನ ಪರಿಚಯ ಮಾಡಲು ಅಜ್ಜಿ ಪ್ರಮೋದಾದೇವಿ ಒಡೆಯರ್ ಹಾಗೂ ತಾಯಿ ತ್ರಿಷಿಕಾ ಕುಮಾರಿ ಸರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.