ತುಮಕೂರು, ಸೆ.21ಸಾಲ ಬಾಧೆಯಿಂದ ಬೇಸತ್ತ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಪಟೂರು ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಜಪ್ಪ (47) ಆತ್ಮಹತ್ಯೆ ಮಾಡಿಕೊಂಡ ರೈತ.
ಈತ ಮೋಟಾರ್ ವೈಂಡಿಂಗ್ ಕೆಲಸದ ಜೊತೆಗೆ ತರಕಾರಿ ವ್ಯಾಪಾರ ಮಾಡುತ್ತಿದ್ದು , ಕೆಲ ತಿಂಗಳ ಹಿಂದೆ ವ್ಯವಸಾಯ ಮಾಡುವ ಉದ್ದೇಶದಿಂದ ಬೋರ್‍ವೆಲ್ ಕೊರೆಸಿದ್ದು , ಅದು ನೀರು ಬಾರದೆ ವಿಫಲಗೊಂಡಿತ್ತು. ಜೊತೆಗೆ ಬೆಳೆ ನಷ್ಟ ಕೂಡ ಸಂಭವಿಸಿತ್ತು. ಇದರಿಂದ ಮನ ನೊಂದು ಮಾಡಿದ ಸಾಲ ತೀರಿಸಲು ದಾರಿ ತೋಚದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಟ್ಟಣ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.






