ಬೆಂಗಳೂರು, ಸೆ.21 ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕರೆತಂದಿದ್ದ ಆರೋಪಿಯ ಸಾವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸಿಐಡಿ ಪೆÇಲೀಸರು ತನಿಖೆ ನಡೆಸಲಿದ್ದಾರೆ.
ಇಂದು ಅಥವಾ ನಾಳೆ ಬೆಳಗ್ಗೆ ಸಿಐಡಿ ಪೆÇಲೀಸರು ಅಮೃತಹಳ್ಳಿ ಪೆÇಲೀಸ್ ಠಾಣೆಗೆ ತೆರಳಿ ತನಿಖೆ ಕೈಗೊಳ್ಳಲಿದ್ದು, ತನಿಖೆ ವರದಿ ಬಂದ ನಂತರವಷ್ಟೇ ಆರೋಪಿಯ ಸಾವು ಹೇಗೆ ಸಂಭವಿಸಿದೆ ಎಂಬುದು ತಿಳಿದುಬರಲಿದೆ.
ಮನೆ ಕಳ್ಳತನ ಪ್ರಕರಣದಲ್ಲಿ ಅಮೃತಹಳ್ಳಿಠಾಣೆ ಪೆÇಲೀಸರು ಆರೋಪಿ ಸತೀಶ್ ಅಲಿಯಾಸ್ ಸ್ಕೆಚ್ ಮಂಜ (35) ಠಾಣೆಯ 2ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದನು.
ಪೆÇಲೀಸರು ಈತನನ್ನು ವಿಚಾರಣೆ ಕರೆತರುತ್ತಿದ್ದಾಗ ತಪ್ಪಿಸಿಕೊಂಡು ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ, ಇಲ್ಲವೆ ಪೆÇಲೀಸರ ಹೊಡೆತ ತಾಳಲಾಗದೆ ತಪ್ಪಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆಯೇ ಅಥವಾ ಯಾರಾದರೂ ತಳ್ಳಿದ್ದಾರೆಯೇ ಎಂಬ ಬಗ್ಗೆ ಸಿಐಡಿ ಪೆÇಲೀಸರ ತನಿಖೆಯಿಂದ ತಿಳಿದುಬರಲಿದೆ.
ಆರೋಪಿಯ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಮೂಲತಃ ರಾಮನಗರ ಜಿಲ್ಲೆ, ವೀರಸಾಗರ ನಿವಾಸಿಯಾದ ಆರೋಪಿ ಸತೀಶನ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಹಲವು ಬಾರಿ ಪೆÇಲೀಸರ ಕೈಗೆ ಸಿಕ್ಕಿ ಜೈಲಿಗೆ ಹೋಗಿ ಬಂದಿದ್ದರೂ ಸಹ ತನ್ನ ಚಾಳಿ ಬಿಡದೆ ಮನೆಗಳ್ಳತನ ಮಾಡಿ ಬಂಧಿತನಾಗಿ, ಇದೀಗ ಕಟ್ಟಡದಿಂದ ಜಿಗಿದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.