ಬೆಂಗಳೂರು,ಸೆ.21 ಧರ್ಮ ಒಡೆಯಲು ಹೋಗಿ ಜನರಿಂದ ಮೂಲೆಗುಂಪಾಗಿ ಅಸ್ತಿತ್ವಕ್ಕೆ ಹೆಣಗಾಡುತ್ತಿರುವ ನಿಮ್ಮಿಂದ ನಮಗೆ ಯಾವುದೇ ನೈತಿಕ ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ತಿರುಗೇಟು ನೀಡಿದೆ.
ಬಿಜೆಪಿಯವರು ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಟ್ವಿಟರ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಧರ್ಮ ಒಡೆಯಲು ಹೋಗಿ ಜನತೆಯಿಂದ ನೀವು ತಿರಸ್ಕøತರಾಗಿದ್ದೀರಿ. ನಮ್ಮ ಪಕ್ಷವನ್ನು ಕೋಮುವಾದಿ ಎಂದು ಹೇಳುವ ನೈತಿಕ ನಿಮಗಿಲ್ಲ ಎಂದು ಹರಿಹಾಯ್ದಿದೆ.
ಕಾಂಗ್ರೆಸ್ನ ಯಾವುದೇ ಶಾಸಕರನ್ನು ಬಿಜೆಪಿ ಸಂಪರ್ಕ ಮಾಡಿಲ್ಲ. ವರ್ಗಾವಣೆಯಲ್ಲಿ ತೊಡಗಿರುವ ಕಿಂಗ್ಪಿನ್ ಹಸ್ತಕ್ಷೇಪ ಹಾಗೂ ಭ್ರಷ್ಟಾಚಾರದಲ್ಲಿ ನಿರತರಾಗಿರುವ ಕೊಳಕು ಆಡಳಿತದಿಂದ ನಿಮ್ಮ ಶಾಸಕರೇ ಬೇಸತ್ತಿದ್ದಾರೆ. ಮೊದಲು ಅದನ್ನು ಸರಿಪಡಿಸಿಕೊಂಡು ಬಿಜೆಪಿಗೆ ನೈತಿಕ ಪಾಠ ಮಾಡಿ ಎಂದು ಸಿದ್ದರಾಮಯ್ಯನವರ ಕಾಲೆಳೆಯಲಾಗಿದೆ.