
ಮೈಸೂರು, ಸೆ.21ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡ ಕವಲಂದೆ ಪೆÇಲೀಸರು ಬಂಧಿಸಿದ್ದಾರೆ.
ಪಿಲ್ಲಹಳ್ಳಿ ಗ್ರಾಮದ ರಾಜೇಶ್, ಮಹದೇವಸ್ವಾಮಿ ಬಂಧಿತರು.
ಆರೋಪಿಗಳು ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಬೈಕ್ನಲ್ಲಿ ಹಿಂಬಾಲಿಸಿ ಸರಗಳನ್ನು ಅಪಹರಿಸುತ್ತಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕ ಮೂರು ಚಿನ್ನದ ನೆಕ್ಲೇಸ್, ಒಂದು ಚಿನ್ನ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಟಿ.ನರಸೀಪುರ, ಮೂಗೂರು, ನಂಜನಗೂಡಿನ ಆಲಂಬೂರು ಸೇರಿದಂತೆ ಇತರ ಕಡೆ ಸರಗಳವು ನಡೆಸಿರುವುದಾಗಿ ತಿಳಿದು ಬಂದಿದೆ.