
ದುಬೈ: ಏಷ್ಯಾಕಪ್ನಲ್ಲಿ ಇಂದಿನಿಂದ ಸೂಪರ್ ಫೋರ್ ಹಂತ ಶುರುವಾಗಲಿದ್ದು ಮೊದಲ ಕಾದಾಟದಲ್ಲಿ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಲಿವೆ.
ಹಾಂಗ್ ಕಾಂಗ್, ಪಾಕಿಸ್ತಾನ ವಿರುದ್ಧ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಗೆದ್ದು ಬೀಗಿದ ಟೀಂ ಇಂಡಿಯಾ ಇದೀಗ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ. ಶುಕ್ರವಾರ ನಡೆಯುವ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ತಂಡದಲ್ಲಿ ಭುವನೇಶ್ವರ್ಗೆ ವಿಶ್ರಾಂತಿ ಕೊಟ್ಟು ಭಾರೀ ಬದಲಾವಣೆಗಳನ್ನ ಮಾಡುವ ಸಾಧ್ಯತೆ ಇದೆ. ಬಾಂಗ್ಲಾ ವಿರುದ್ಧ ರೋಹಿತ್ ಪಡೆ ಗೆಲ್ಲುವ ಫೇವರಿಟ್ ತಂಡ ಎನಿಸಿದೆ.
ಬಾಂಗ್ಲಾಕ್ಕೆ ಡಿ ಆರ್ ಡೈ ಮ್ಯಾಚ್
ಇನ್ನು ಬಾಂಗ್ಲಾದೇಶ ತಂಡ ನಿನ್ನೆ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ ಹೀನಾಯವಾಗಿ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದೆ. ಏಷ್ಯಾಕಪ್ ಟೂರ್ನಿಯನ್ನ ಜೀವಂತವಾಗಿರಿಸಿಕೊಳ್ಳಬೇಕಿದ್ದಲ್ಲಿ ಇಂದು ಟೀಂ ಇಂಡಿಯಾ ವಿರುದ್ಧ ಗೆಲ್ಲಲ್ಲೇಬೇಕಾದ ಅನಿವಾರ್ಯತೆಯನ್ನ ಎದುರಿಸುತ್ತಿದೆ.