ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ರಾಹುಲ್ ಆಗ್ರಹ

ನವದೆಹಲಿ: ರಫೆಲ್ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಎಎಲ್ ಸಾಮರ್ಥ್ಯ ಕುರಿತು ಸುಳ್ಳು ಹೇಳಿಕೆ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಟ್ವಿಟರ್ ನಲ್ಲಿ ವಾಗ್ದಾಳಿ ನದೆಸಿರುವ ರಾಹುಲ್. ರಫೇಲ್ ಒಪ್ಪಂದ ಕುರಿತಂತೆ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ (ಹೆಚ್ಎಎಲ್) ಮಾಜಿ ಮುಖ್ಯಸ್ಥರೇ ರಕ್ಷಣಾ ಸಚಿವರ ಸುಳ್ಳು ಕುರಿತು ಬೆಟ್ಟು ಮಾಡಿದ್ದು, ಇದೀಗ ರಕ್ಷಣಾ ಸಚಿವರ ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರು ಅಸಮರ್ಥನೀಯರಾಗಿದ್ದಾರೆಂದು ಹೇಳಿದ್ದಾರೆ.

ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡ ರಫೇಲ್ ಸಚಿವರು ಇದೀಗ ಬಹಿರಂಗವಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೆಚ್ಎಎಲ್ ಮಾಜಿ ಮುಖ್ಯಸ್ಥರು, ಟಿ.ಎಸ್ ರಾಜು ಸಚಿವರ ಸುಳ್ಳು ಕುರಿತು ಬೆಟ್ಟು ಮಾಡಿದ್ದಾರೆ. ಹೀಗಾಗಿ ರಕ್ಷಣಾ ಸಚಿವೆ ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರು ಅಸಮರ್ಥನೀಯರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ರಫೇಲ್ ಒಪ್ಪಂದ ಕುರಿತು ಸಮಿತಿ ಅಂತಿಮ ನಿರ್ಧಾರಗಳನ್ನು ಕೈಗೊಂಡಿತ್ತು. ಈ ವೇಳೆ ಮಾಜಿ ರಕ್ಷಣಾ ಸಚಿವ ಎಕೆ.ಆ್ಯಂಟನಿಯವರ ಮಧ್ಯಪ್ರವೇಶದಿಂದ ಒಪ್ಪಂದ ರದ್ದಾಗುವಂತಾಗಿತ್ತು. ರಫೇಲ್ ಒಪ್ಪಂದ ಹೆಚ್ಎಎಲ್’ಗೆ ಸಿಗಲು ಆ್ಯಂಟನಿ ಬೆಂಬಲ ನೀಡಿರಲಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಆರೋಪಿಸಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಆ್ಯಂಟನಿಯವರು ರಕ್ಷಣಾ ಸಚಿವೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಹಿತಿ ಮುಚ್ಚಿಡುತ್ತಿದ್ದಾರೆ. ದೇಶದ ಭದ್ರತಾ ವಿಚಾರದಲ್ಲಿ ರಾಜಿ ಮಾಡುವ ಮೂಲಕ ಹಾಲಿ ಸರ್ಕಾರ ತಪ್ಪು ಮಾಡುತ್ತಿದೆ. ಹಾಲಿ ಸರ್ಕಾರ ಹೇಳುವಂತೆ ಯುಪಿಎ ಸರ್ಕಾರ ನಡೆಸಿದ್ದ ಒಪ್ಪಂದಕ್ಕಿಂದ ಮೋದಿ ಸರ್ಕಾರ ನಡೆಸಿದ ಒಪ್ಪಂದವೇ ಅಗ್ಗದ್ದಾಗಿದ್ದರೆ, ಕೇವಲ 36 ವಿಮಾನಗಳನ್ನೇಕೆ ಖರೀದಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ