ದುಬೈ: ಯುಇಎನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನೆಮೆಂಟ್ನಲ್ಲಿ ಲೀಗ್ ಹಂತದ ಪಂದ್ಯಗಳು ಇನ್ನು ಮುಗಿಯಲಿರುವಂತೆಯೇ ಸೂಪರ್ ಫೋರ್ ಹಂತದ ಎಲ್ಲ ನಾಲ್ಕು ತಂಡಗಳ ಲೈನಪ್ ಸಿದ್ಧಗೊಂಡಿದೆ.
‘ಎ’ ಗುಂಪಿನಲ್ಲಿ ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಸೂಪರ್ ಫೋರ್ ವಿಭಾಗದಲ್ಲಿ ತನ್ನ ಜಾಗವನ್ನು ಖಾತ್ರಿಪಡಿಸಿತ್ತು. ಈ ಮೊದಲು ಪಾಕಿಸ್ತಾನ ವಿರುದ್ಧವೂ ಸೋಲು ಅನುಭವಿಸಿರುವ ಹಾಂಕಾಂಗ್ ನಿರ್ಗಮನದ ಹಾದಿ ಹಿಡಿದಿದೆ.
ಅತ್ತ ‘ಬಿ’ ಗುಂಪಿನಲ್ಲಿ ಎರಡು ಪಂದ್ಯಗಳಲ್ಲೂ ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ವಿರುದ್ಧ ಸೋಲು ಅನುಭವಿಸಿರುವ ಶ್ರೀಲಂಕಾ ಸಹ ಕೂಟದಿಂದಲೇ ಹೊರಬಿದ್ದಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಸೂಪರ್ 4 ಹಂತದಲ್ಲೂ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಸವಾಲನ್ನು ಭಾರತ ಎದುರಿಸಲಿದೆ.
ಸೂಪರ್ 4 ಹಂತಕ್ಕೆ ಅರ್ಹತೆ ಪಡೆದ ತಂಡಗಳು:
ಎ ಗುಂಪು: ಭಾರತ, ಪಾಕಿಸ್ತಾನ,
ಬಿ ಗುಂಪು: ಬಾಂಗ್ಲಾದೇಶ, ಅಫಘಾನಿಸ್ತಾನ
ಸೂಪರ್ 4 ವೇಳಾಪಟ್ಟಿ ಇಂತಿದೆ:
ಸೆ.21, ಶುಕ್ರವಾರ:
ಭಾರತ vs ಬಾಂಗ್ಲಾದೇಶ, ದುಬೈ
ಪಾಕಿಸ್ತಾನ vs ಅಫಘಾನಿಸ್ತಾನ, ಅಬುದಾಬಿ
ಸೆ. 23, ಭಾನುವಾರ
ಭಾರತ vs ಪಾಕಿಸ್ತಾನ, ದುಬೈ
ಅಫಘಾನಿಸ್ತಾನ vs ಬಾಂಗ್ಲಾದೇಶ, ಅಬುದಾಬಿ
ಸೆ. 25, ಮಂಗಳವಾರ
ಭಾರತ vs ಅಫಘಾನಿಸ್ತಾನ, ದುಬೈ
ಸೆ. 26, ಬುಧವಾರ
ಪಾಕಿಸ್ತಾನ vs ಬಾಂಗ್ಲಾದೇಶ, ಅಬುದಾಬಿ
ಸೆ. 28: ಫೈನಲ್, ದುಬೈ
(ಈ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 5ಕ್ಕೆ ಆರಂಭವಾಗಲಿದೆ)
ಇಲ್ಲಿ ಗಮನಾರ್ಹ ಅಂಶವೆಂದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಿದರೆ ಮೂರನೇ ಬಾರಿಗೆ ಸೆಪ್ಟೆಂಬರ್ 28ರಂದು ಪ್ರಶಸ್ತಿಗೆ ಸೆಣಸುವ ಅವಕಾಶವಿದೆ.