ಸಚಿವ ಡಿ ಕೆ ಶಿವಕುಮಾರ್ ಆರೋಗ್ಯದಲ್ಲಿ ಚೇತರಿಕೆ: ನಮ್ಮದು ಓಡಿ ಹೋಗುವ ಜಾಯಮಾನವಲ್ಲ: ಸಂಸದ ಡಿ ಕೆ ಸುರೇಶ್

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ ಆರೋಗ್ಯದಲ್ಲಿ ಚೇತರಿಕೆ ಕಂದುಬಂದಿದ್ದು, ಇಂದು ಅಥವಾ ನಾಳೆ ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆಗಳನ್ನೂ ನೀಡಲಾಗುತ್ತಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.

ಬೆಂಗಳೂರುನಲ್ಲಿ ಮಾತನಾಡಿದ ಸಂಸದ ಡಿ ಕೆ ಸುರೇಶ್, ಡಿಕೆಶಿಯವರದ್ದು, ಓಡಿಹೋಗುವ ಜಾಯಮಾನ ಅಲ್ಲ. ಭಯದಿಂದಲೂ ಆಸ್ಪತ್ರೆಗೆ ಅಡ್ಮಿಟ್​ ಆಗಿಲ್ಲ. ಈ ಬಗ್ಗೆ ಅನಗತ್ಯ ಸುದ್ದಿಗಳು ಬೇಡ. ನಾವು ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇವೆ ಎಂದರು.

ಇನ್ನು ಜಾರಕಿಹೊಳಿ ಸಹೋದರರ​ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೂ ಜಾರಕಿಹೊಳಿ ಬ್ರದರ್ಸ್​ಗೂ ಏನ್ರೀ ಸಂಬಂಧ ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಎಸ್​​ವೈ ಅವರ ಪಾನ್​ ಮೂವ್​ ಹೇಳಿಕೆಗೆ ಟಾಂಗ್ ಕೊಟ್ಟ ಸುರೇಶ್​, ಬಿಎಸ್​ವೈ ಅವರೇ ಅಂಪೈರ್​ ಇಲ್ಲದೇ ಆಟವಾಡುತ್ತಿರುವುದು. ಅವರಿಗೆ ಅಂಪೈರ್​ ಯಾರು ಅಂತಲೇ ಗೊತ್ತಿಲ್ಲ. ಇದರ ಬಗ್ಗೆ ಅವರನ್ನೇ ಕೇಳಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ