ಇಂಧೋರ್: ಖ್ಯಾತ ಜಾನಪದ ನರ್ತಕಿ, ರಿಯಾಲಿಟಿ ಶೋ ಸ್ಪರ್ಧಿ ರೂಪಾಲಿ ನಿರಾಪುರೆ ಅವರ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ ನಡೆದಿದ್ದು, ಹಾಡ ಹಗಲೇ ನಡೆದ ಈ ಕೃತ್ಯದಲ್ಲಿ ರೂಪಾಲಿ ದೃಷ್ಟಿ ನಾಶವಾಗಿದೆ.
ರೂಪಾಲಿ ಇಂದು ಕಾರ್ಯಕ್ರಮದ ನಿಮಿತ್ತ ಯುಎಸ್ಗೆ ತೆರಳಬೇಕಿತ್ತು. ವಿಮಾನದಲ್ಲಿ ಹೊರಡುವ ಒಂದು ತಾಸು ಮೊದಲು ಈ ಘಟನೆ ನಡೆದಿದೆ.
ಆ್ಯಸಿಡ್ನಿಂದ ರೂಪಾಯಿಯ ಮುಖದ ಮೇಲೆ ಯಾವುದೇ ಗಾಯಗಳು ಆಗಿಲ್ಲ. ಆದರೆ ಕಣ್ಣಿನ ಕಾರ್ನಿಯಾಗಳು ಹಾನಿಗೊಳಗಾಗಿದ್ದು ದೃಷ್ಟಿ ಮಂದವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರೋಪಿ ಮಹೇಂದ್ರ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ರೂಪಾಲಿಯನ್ನು ಡಾನ್ಸ್ ಕ್ಲಾಸ್ನಲ್ಲಿ ಭೇಟಿಯಾಗಿದ್ದ. ಹಲವು ಬಾರಿ ತನ್ನನ್ನು ಮದುವೆಯಾಗೆಂದು ಒತ್ತಾಯ ಮಾಡಿದ್ದ. ಅಷ್ಟೂ ಬಾರಿ ಅವನನ್ನು ರೂಪಾಲಿ ತಿರಸ್ಕರಿಸಿದ್ದಳು. ಇದರಿಂದ ಮಹೇಂದ್ರ ಆ್ಯಸಿಡ್ ದಾಳಿ ನಡೆಸಿದ್ದಾನೆ.
ರೂಪಾಲಿ ಮುಖದ ಎದುರು ರಾಸಾಯನಿಕ ಸಿಂಪಡಿಸಿ ಆತ ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.