ಬೆಂಗಳೂರು, ಸೆ.18- ಹಾಕಿ ಕರ್ನಾಟಕ ಸಂಸ್ಥೆಯ ಆಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಕಿ ಮೈದಾನದಲ್ಲಿ ಇಂದಿನಿಂದ 3ನೆ ಹಾಕಿ ಇಂಡಿಯಾ 5-ಎ-ಸೈಡ್ ಹಿರಿಯರ ರಾಷ್ಟ್ರೀಯ ಚಾಂಪಿಯನ್ ಶಿಪ್ -2018 ಪಂದ್ಯಾವಳಿ ಆರಂಭವಾಗಿದೆ.
ಪುರುಷರು , ಮಹಿಳೆಯರು ಹಾಗೂ ಮಿಶ್ರ ಪಂದ್ಯಗಳಲ್ಲಿ ಭಾರತದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿವೆ ಎಂದು ಹಾಕಿ ಕರ್ನಾಟಕ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎ.ಬಿ.ಸುಬ್ಬಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ಪಂದ್ಯ ನಡೆಯುತ್ತಿದೆ. ಅಂತಾರಾಷ್ಟ್ರೀಯ ಹಾಕಿ ಪಟುಗಳಾದ ಪ್ರೀತಿ ದುಬೆ, ಸೋನಾಲ್ ಮಿಂಜ್, ಲಾಲ್ಕೌಟೆಲಿ, ಸತ್ಬೀರ್ ಸಿಂಗ್, ರಾಜ್ಕುಮಾರ್ ಪಾಲ್, ಜ್ಯೂನಿಯರ್ ವಿಶ್ವಕಪ್ ವಿಜೇತರಾದ ಪರ್ವಿಂದರ್ ಸಿಂಗ್ ಮತ್ತು ಹರ್ಜೀತ್ ಸಿಂಗ್ ಆರು ದಿನಗಳ ಈ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಸೆ.22ರಂದು ಪುರುಷರು ಮತ್ತು ಮಹಿಳೆಯರ ಸಂಯೋಜಿತ ತಂಡದ ಪಂದ್ಯಗಳು ನಡೆಯಲಿದ್ದು , ಈ ಚಾಂಪಿಯನ್ಶಿಪ್ಗೆ ವಿಶೇಷ ಆಕರ್ಷಣೆಯಾಗಿದೆ.
ಕರ್ನಾಟಕ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ತಮಿಳುನಾಡು, ಹಾಕಿ ತಂಡಗಳು , ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಪೈಪೆÇೀಟಿ ನಡೆಸಲಿವೆ.