
ಕಳೆದ ವರ್ಷ ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರ ಬೆಳ್ಳಿ ಪರದೆ ಮೇಲೆ ಅಷ್ಟೋಂದು ಸದ್ದು ಮಾಡದಿದ್ದರು. ಯೂಟ್ಯೂಬ್ ನಲ್ಲಿ ಮಾತ್ರ ಸಂಚಲನ ಸೃಷ್ಟಿಸಿದೆ.
ಹೌದು ಚಕ್ರವರ್ತಿ ಚಿತ್ರದ ಹಿಂದಿ ಆವೃತ್ತಿಯನ್ನು ಸಿನಿಕ್ರೋನ್ ಮೂವೀಸ್ ಆರು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು ಆರು ದಿನಗಳಲ್ಲೇ 10 ಮಿಲಿಯನ್ ಜನ ಚಿತ್ರವನ್ನು ವೀಕ್ಷಿಸಿದ್ದಾರೆ.
ಭಾರತದಲ್ಲೇ ಅಲ್ಲದೆ ಕತಾರ್, ಯುಎಇ ಮತ್ತು ನೇಪಾಳದಲ್ಲೂ ಹೆಚ್ಚಿನ ಜನರು ದರ್ಶನ್ ಚಿತ್ರವನ್ನು ವೀಕ್ಷಿಸಿರುವುದು ವಿಶೇಷ.
ದರ್ಶನ್ ಚಕ್ರವರ್ತಿ ಚಿತ್ರದಲ್ಲಿ 80ರ ದಶಕದ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಅಭಿನಯಿಸಿದ್ದರು. ದರ್ಶನ್ ಗೆ ಜೋಡಿಯಾಗಿ ದೀಪಾ ಸನ್ನಿದಿ ನಟಿಸಿದ್ದರು. ಇನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ ಸಹ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಅಭಿಯಿಸಿದ್ದು ವಿಶೇಷವಾಗಿತ್ತು.
ಚಿತ್ರವನ್ನು ಚಿಂತನ್ ಎಂಬುವರು ನಿರ್ದೇಶಿಸಿದ್ದರು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದರು.