]ಬೆಂಗಳೂರು, ಸೆ.17-ಸಕಲೇಶಪುರದ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಸೇರಲು ಸುಮಾರು 30 ಕೋಟಿ ರೂ.ಗಳ ಆಫರ್ ನೀಡಲಾಗಿದೆ.
ಅದು ಶಾಸಕರ ಪತ್ನಿ ಮೂಲಕ ಬಿಜೆಪಿ ಗಾಳ ಹಾಕಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.
ಗಣೇಶ ಹಬ್ಬದಂದು ಬಿಜೆಪಿ ಮುಖಂಡರೊಬ್ಬರು ಮನೆಗೆ ಬಂದು ಬಿಜೆಪಿ ಸೇರುವಂತೆ ಆಫರ್ ಮಾಡಿದ್ದರು ಎಂಬ ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ಅದೇ ರೀತಿ ಶಿಡ್ಲಘಟ್ಟ ಶಾಸಕ ಮುನಿಯಪ್ಪ ಅವರ ಮಗನ ಮೂಲಕ ಆಫರ್ ಮಾಡಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.ಈ ಬಗ್ಗೆ ಮುನಿಯಪ್ಪ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದು, ಸಚಿವ ಪುಟ್ಟರಂಗಶೆಟ್ಟಿ ಮುಂತಾದವರಿಗೂ ಕೂಡ ಹಲವರು ಬಿಜೆಪಿ ಸೇರುವಂತೆ ಆಮಿಷವೊಡ್ಡಿದ್ದಾರೆ.ಈ ಸಂಬಂಧ ನಿನ್ನೆ ಕಾರ್ಯಕ್ರಮವೊಂದರಲ್ಲಿ ಪುಟ್ಟರಂಗಶೆಟ್ಟಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದರು.
ಅನಿಲ್ ಚಿಕ್ಕಮಾದು ಪತ್ರಿಕಾಗೋಷ್ಠಿ ನಡೆಸಿ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ತಿಳಿಸಿದ್ದರು.
ಬಳ್ಳಾರಿಯ ಹಲವು ಶಾಸಕರನ್ನೂ ಕೂಡ ಪಕ್ಷದತ್ತ ಸೆಳೆಯಲು ಪ್ರಯತ್ನ ನಡೆಸಲಾಗಿದೆ.